GT Vs PBKS | ಕೊನೆಯ 2 ಬಾಲ್.. 2 ಸಿಕ್ಸರ್.. ಸೂಪರ್ ತೆವಾಟಿಯಾ

1 min read
gt-vs-pbks--gujarat-titans-beat-punjab-kings saaksha tv

GT Vs PBKS | ಕೊನೆಯ 2 ಬಾಲ್.. 2 ಸಿಕ್ಸರ್.. ಸೂಪರ್ ತೆವಾಟಿಯಾ

ಪಂಜಾಬ್ ವಿರುದ್ಧ ಗೆಲ್ಲಲು ಗುಜರಾತ್ ಟೈಟಾನ್ಸ್‌ ಗೆ ಕೊನೆಯ ಓವರ್‌ನಲ್ಲಿ 19 ರನ್‌ಗಳ ಅಗತ್ಯವಿತ್ತು. ಮೊದಲ 4 ಎಸೆತಗಳಲ್ಲಿ 7 ರನ್ ಮಾತ್ರ ಬಂತು. ಹೀಗಾಗಿ ಸಮೀಕರಣ ಕೊನೆಯ ಎಸೆತಗಳಲ್ಲಿ 2 ಸಿಕ್ಸರ್‌  ಬಾರಿಸಬೇಕಾಯಿತು. ತೀವ್ರ ಒತ್ತಡದ ನಡುವೆ ಎರಡು ಎಸೆತಗಳಿಗೆ ಎರಡು ಸಿಕ್ಸರ್ ಬಾರಿಸೋದು ಎಂತಹ ಬ್ಯಾಟರ್ ಗೆ ಆದ್ರೂ ಕಷ್ಟದ ಕೆಲಸ ಆದ್ರ ರಾಹುಲ್ ತೆವಾಟಿಯಾ ಅದನ್ನ ಮಾಡಿ ತೋರಿಸಿದರು.

ಎರಡು ವರ್ಷಗಳ ಹಿಂದೆ ಇದೇ ಪಂಜಾಬ್ ವಿರುದ್ಧ ರಾಹುಲ್ ತೆವಾಟಿಯಾ ಐದು ಸಿಕ್ಸರ್ ಗಳನ್ನು ಬಾರಿಸಿ ಪಂದ್ಯವನ್ನ ಗೆಲ್ಲಿಸಿಕೊಟ್ಟಿದ್ದರು. ಆ ಪಂದ್ಯವನ್ನ ನೆನಪು ಮಾಡುತ್ತಾ ಶುಕ್ರವಾರಿ ರಾಹುಲ್ ತೆವಾಟಿಯಾ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್ ಗೆ ಅಟ್ಟಿ ಗುಜರಾತ್ ಟೈಟಾಲ್ಸ್ ಗೆ ಗೆಲುವು ತಂದುಕೊಂಡಿದ್ದಾರೆ. ಇದರೊಂದಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್ ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು.  ಪಂಜಾಬ್ ಪರ ಲಿವಿಂಗ್ ಸ್ಟೋನ್ 64 ರನ್ ಗಳಿಸಿದರು. ಆ ನಂತರ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 190 ರನ್ ಗಳಿಸಿತು.   

gt-vs-pbks--gujarat-titans-beat-punjab-kings  saaksha tv

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ನಾಯಕ ಮಯಾಂಕ್ ಅಗರ್ವಾಲ್  5 ರನ್ ಮತ್ತು ಬೈರ್‌ಸ್ಟೋವ್  8 ರನ್ ಗಳಿಸಿ ಬೇಗನೆ ಔಟ್ ಆದ್ರು. ಈ ವೇಳೆ ಲಿವಿಂಗ್‌ಸ್ಟೋನ್ ಪಂಜಾಬ್ ತಂಡಕ್ಕೆ ಆಸರೆಯಾದರು.  ಜಿತೀಶ್ ಶರ್ಮಾ 23 ರನ್,  ಶಾರೂಕ್ ಖಾನ್ 15 ರನ್ ಗಳನ್ನ ಗಳಿಸಿದರು.

ಪಂಜಾಬ್ ನೀಡಿದ ಗುರಿಯನ್ನ ಬೆನ್ನುಟ್ಟಿದ ಗುಜರಾತ್ ಟೈಟಾನ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ವೇಡ್ ಆರು ರನ್ ಗಳಿಸಿ ಔಟ್ ಆದ್ರು. ಆದ್ರೆ ಶುಭ್ ಮನ್ ಗಿಲ್ ಪವರ್ ಪ್ಲೇ ನಲ್ಲಿ ಅಬ್ಬರದ ಆಟವಾಡಿದ್ರು.   ಸುದರ್ಶನ್ ಜೊತೆ ಸೇರಿ ಶುಭ್ ಮನ್ 68 ರನ್ ಗಳ ಜೊತೆಯಾಟವಾಡಿದರು.  ಶುಭ್ ಮನ್ ಗಿಲ್ 96 ರನ್ ಗಳಿಸಿ ಸೆಂಚೂರಿ ಮಿಸ್ ಮಾಡಿಕೊಂಡರು.

ನಂತರ ಹಾರ್ದಿಕ್ ಪಾಂಡ್ಯ 27 ರನ್ ಸಿಡಿಸಿ ಔಟ್ ಆದ್ರು.  ಆದರೆ, ರಾಹುಲ್ ತೆವಾಟಿಯಾ 3 ಎಸೆತಗಳಲ್ಲಿ ಔಟಾಗದೆ 13 ರನ್ ಸಿಡಿಸಿ ಗುಜರಾತ್ ಟೈಟಾನ್ಸ್ ಗೆಲುವಿಗೆ ಕಾರಣರಾದ್ರು. gt-vs-pbks–gujarat-titans-beat-punjab-kings 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd