Hemalatha | ಕನ್ನಡ ಚಿತ್ರರಂಗದ ಹಿರಿಯ ನಟಿ ಇನ್ನಿಲ್ಲ
ಗುಬ್ಬಿ ವೀರಣ್ಣ ಪುತ್ರಿ ಹೇಮಲತಾ ವಿಧಿವಶ
ಚಿಕಿತ್ಸೆ ಫಲಕಾರಿಯಾದ ಆಸ್ಪತ್ರೆಯಲ್ಲಿ ಕೊನೆಯುಸಿರು
ದೊಡ್ಡಬಳ್ಳಾಪುರ ನಗರದ ವಾಸವಿದ್ದ ಹೇಮಲತಾ
ಖಾಸಗಿ ಆಸ್ಪತ್ರೆಗೆ ದೇಹ ದಾನ ಮಾಡಿದ ಕುಟುಂಬ
ಬೆಂಗಳೂರು : ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ ಅವರ ಪುತ್ರಿ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದೆ ಹೇಮಲತಾ ಅವರಿಗೆ ಹೃದಯಾಘಾತ ಆಗಿತ್ತು. ಹೀಗಾಗಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

70 ವರ್ಷದ ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ವಾಸವಿದ್ದರು.
ಅವರ ಇಚ್ಛೆಯಂತೆ ಕುಟುಂಬಸ್ಥರು ಹೇಮಲತಾ ಅವರ ದೇಹವನ್ನು ಖಾಸಗಿ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಮೂಲತಃ ಭರತನಾಟ್ಯ ಕಲಾವಿದೆಯಾಗಿದ್ದ ಹೇಮಲತಾ ಅವರು ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.
ಕಲ್ಯಾಣ್ ಕುಮಾರ್ ಅವರ ಕಲಾವತಿ ಚಿತ್ರದಲ್ಲಿ ಹೇಮಲತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.