Gujarat – Himachal: ಗುಜರಾತ್ ನಲ್ಲಿ ಅರಳಿದ ಕಮಲ – ಗುಡ್ಡಗಾಡು ರಾಜ್ಯ ‘ಕೈ’ ವಶ…
ಗುಜರಾತ್, ಹಿಮಾಚಲ ವಿಧಾನಸಭಾ ಚುನಾವಣೆ ಫಲಿತಾಂಶ ಬಹುತೇಕ ಹೊರ ಬರುತ್ತಿದ್ದು, ಗುಜರಾತ್ ನಲ್ಲಿ ಬಿಜೆಪಿ ಹಿಮಾಚಲದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದು ಖಚಿತವಾಗುತ್ತಿದೆ.
ಗುಜರಾತ್ ನಲ್ಲಿ ಸತತ ಏಳನೇ ಭಾರಿಗೆ ಅಧಿಕ್ಕಾರಕ್ಕೇರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರ ಪ್ರಮುಖ ನೇತರರ ಜನಪ್ರಿಯತೆ ನಡುವೆ ಬಿಜೆಪಿ ದಾಖಲೆ ಗೆಲುವಿಗೆ ಸಿದ್ಧವಾಗಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಕ್ಕೆ ಎಂಟ್ರಿ ಕೊಡುವಲ್ಲಿ ಸಫಲವಾಗಿದೆ. ಆದರೆ ಆಮ್ ಆದ್ಮಿ ಎಂಟ್ರಿ ಕಾಂಗ್ರೆಸ್ ಗೆ ಹೊಡೆತ ಕೊಟ್ಟಿದ್ದು ಕಾಂಗ್ರೆಸ್ ಹೀನಾಯವಾಗಿ ಕುಸಿತ ಕಾಣುವಂತಾಗಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮುಂಜಾನೆಯಿಂದ ಟಫ್ ಫೈಟ್ ನೀಡಿದ ಬಿಜೆಪಿ ಕೊನೆಯಲ್ಲಿ ಕಾಂಗ್ರಸ್ ಎದುರು ಫೈಟ್ ಮಾಡಿವಲ್ಲಿ ಸೋತಿದೆ. ಗುಡ್ಡಗಾಡು ರಾಜ್ಯದಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಶುರುವಾಗಿದೆ.
Gujarat – Himachal: The lotus that bloomed in Gujarat