ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯದಲ್ಲಿ ಈಗಾಗಲೇ 52 ಪಂದ್ಯಗಳು ಮುಕ್ತಾಯಗೊಂಡಿವೆ. ಈಗಾಗಲೇ ಟೂರ್ನಿ ಪ್ಲೇ ಆಫ್ ಹಂತದ ಹೊಸ್ತಿಲಿಗೆ ಬಂದು ನಿಂತಿದೆ. ಈ ಮಧ್ಯೆ ಪೈಪೋಟಿ ಜೋರಾಗಿದ್ದು, ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದ ತಂಡಗಳು ಈಗ ಭರ್ಜರಿ ಪ್ರದರ್ಶನ ನೀಡುತ್ತಿವೆ. ಹೀಗಾಗಿ ಯಾವ ತಂಡ ಫ್ಲೇ ಆಫ್ ಪ್ರವೇಶಿಸಲಿದೆ ಎಂಬುವುದನ್ನು ಹೇಳದಂತಾಗಿದೆ.
200+ ಟಾರ್ಗೆಟ್ ನೀಡಿದರೂ ಸುಲಭವಾಗಿ ಚೇಸ್ ಮಾಡಿ ಗೆಲ್ಲುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ತಂಡ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನದಲ್ಲಿ ಭದ್ರವಾಗಿದ್ದು, ಪ್ಲೇ ಆಫ್ಗೆ ಬಹುತೇಕ ಕಾಲಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಸೋಲುಂಡು +0.951 ರನ್ರೇಟ್ನೊಂದಿಗೆ 16 ಅಂಕ ಸಂಪಾದಿಸಿದೆ.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 13 ಅಂಕ ಸಂಪಾದಿಸಿದೆ. ಲಖನೌ ಸೂಪರ್ ಜೇಂಟ್ಸ್ ತಂಡ ತೃತೀಯ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು 11 ಅಂಕ ಸಂಪಾದಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು, ಆರು ಸೋಲುಂಡು +0.388ರನ್ರೇಟ್ನೊಂದಿಗೆ 10 ಅಂಕ ಸಂಪಾದಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದನೇ ಸ್ಥಾನದಲ್ಲಿದೆ. ಆಡಿದ ಹತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಐದರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿದೆ. ಮುಂಬಯಿ ಇಂಡಿಯನ್ಸ್ 6ನೇ ಸ್ಥಾನದಲ್ಲಿದೆ. ಐದು ಗೆಲುವು ಕಂಡು 10 ಅಂಕ ಸಂಪಾದಿಸಿದೆ. ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ ಐದು ಸೋಲು, ಐದು ಗೆಲುವು ಕಂಡಿದೆ. ಇನ್ನುಳಿದಂತೆ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆದರೆ, ಇದುವರೆಗೂ ಯಾವುದೇ ತಂಡ ಟೂರ್ನಿಯಿಂದ ಹೊರಗೆ ಬಿದ್ದಿಲ್ಲ ಎಲ್ಲ ತಂಡಗಳ ಮಧ್ಯೆ ಪೈಪೋಟಿ ಜೋರಾಗಿದೆ.








