Gurupurnami : ಕೈವಾರ ತಾತಯ್ಯನವರಿಗೆ ವಿಶೇಷ ಪೂಜೆ
ಚಿಕ್ಕಬಳ್ಳಾಪುರ : ಇಂದು ಗುರುಪೌರ್ಣಮಿ ಹಿನ್ನೆಲೆಯಲ್ಲಿ ಕೈವಾರದ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕೈವಾರ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಸಂಗೀತೋತ್ಸವ ಹಾಗೂ ಗುರುಪೂಜೆ ನಡೆಯುತ್ತಿದೆ.

ಇಂದು ಗುರು ಪೌರ್ಣಮಿ ಹಿನ್ನೆಲೆಯಲ್ಲಿ ಸದ್ಗುರು ಯೋಗಿನಾರಾಯಣ ತಾತಯ್ಯನವರಿಗೆ ಗುರುಪೂಜೆ ನೆರವೇರಿದ್ದು, ತಾತಯ್ಯನವರ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.
ಯೋಗಿನಾರಾಯಣ ಮಠದ ಧರ್ಮಾಧಿಕಾರಿ ಡಾ ಎಂ.ಆರ್ .ಜಯರಾಂ ನೇತೃತ್ವದಲ್ಲಿ ಗುರುಪೂಜೆ ನೆರವೇರಿದೆ.