ಹೆಚ್ ಡಿಕೆ ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು : ಬಿಜೆಪಿ ವ್ಯಂಗ್ಯ H D Kumaraswamy saaksha tv
ಬೆಂಗಳೂರು : ನನ್ನ ರಾಜಕೀಯ ಹಾಗೂ ವಯಕ್ತಿಕ ಬದುಕು ತೆರೆದ ಪುಸ್ತಕ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದೆ.
ಬಿಜೆಪಿ ತನ್ನ ಟ್ವೀಟ್ ನಲ್ಲಿ… ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ, ನೀವು ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು. ನನ್ನ ಬದುಕು ತೆರೆದ ಪುಸ್ತಕ, ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂಬ ನಿಮ್ಮ ಧೈರ್ಯ ಅಭಿನಂದನೀಯ. ಆದರೆ ಕಾನೂನು ಪ್ರಕಾರ “ಪಾರದರ್ಶಕ ಕಾಯ್ದೆ” ಉಲ್ಲಂಘನೆಯೂ ಅಪರಾಧವಲ್ಲವೇ? ತೆರೆದ ಪುಸ್ತಕ, ತೆರೆದ ಬಾವಿಯಷ್ಟೇ ಅಪಾಯವಂತೆ ಎಂದು ಕುಟುಕಿದೆ.
ಇನ್ನು ನಿನ್ನೆ ಹೆಚ್ ಡಿ ಕುಮಾರಸ್ವಾಮಿ ಮಾತನಾಡುತ್ತಾ… ನನ್ನ ರಾಜಕೀಯ ಹಾಗೂ ವಯಕ್ತಿಕ ಬದುಕು ತೆರೆದ ಪುಸ್ತಕ. ನಾನು ಯಾವುದನ್ನೂ ಮುಚ್ಚಿಟ್ಟಿಲ್ಲ, ವಿಧಾನಸಭೆ ಕಲಾಪದಲ್ಲೇ ಚರ್ಚಿಸಿರುವೆ . ಕೆಲವೊಮ್ಮೆ ತಪ್ಪುಗಳು ನಡೆದ್ರೂ ತಿದ್ದಿಕೊಳ್ಳುವ ಪ್ರಯತ್ನ ಮಾಡಿರುವೆ. ಬಿಜೆಪಿಯವರದ್ದು ಒಬ್ಬೊಬ್ಬರದ್ದೂ ಒಂದೊಂದು ಇತಿಹಾಸ ಇದೆ ಎಂದಿದ್ದರು.