`ಪುಟ್ಕೋಸಿ ವಿಪಕ್ಷ ನಾಯಕ’ ಸ್ಥಾನಕ್ಕಾಗಿ… : ಸಿದ್ದು ವಿರುದ್ಧ ಹೆಚ್ಡಿಕೆ ಗುಡುಗು Siddaramaiah saaksha tv
ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮುಂದುವರೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಪತನ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ “ಪುಟ್ಕೋಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್ ನಾಯಕ” ಎಂದು ಹೇಳುವ ಮೂಲಕ ಗುಡುಗಿದ್ದಾರೆ.
ಮುಂದುವರೆದು ಸಿದ್ದರಾಮಯ್ಯ ವಿರುದ್ಧ ಬೆಂಕಿಕಾರಿದ ಕುಮಾರಸ್ವಾಮಿ, ನೀವು ನನ್ನ ಬಗ್ಗೆ ಮಾತನಾಡಬೇಡಿ.
ಗೂಟದ ಕಾರಿಗಾಗಿ ನಿಮ್ಮ ಪಕ್ಷದ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು.
ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟು ಇತ್ತು ಅನ್ನೋದು ನನಗೆ ಗೊತ್ತಿದೆ.
ಅಧಿಕಾರಕ್ಕಾಗಿ ನೀವು ಎಷ್ಟೆಟ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಗರಂ ಆದರು.