ಅವರು ಯಾವ ದೊಣ್ಣೆ ನಾಯಕ : ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ಕಿಡಿ
ಕಲಬುರಗಿ : ಉಪಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಯಾರು ಇವರು ನನಗೆ ಹೇಳೋಕೆ..? ಅವರು ಯಾವ ಡೊಣ್ಣೆ ನಾಯಕ..? ಅವರ ಪರ್ಮಿಷನ್ ತಗೋಂಡು ಅಭ್ಯರ್ಥಿ ಹಾಕಬೇಕಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರು, ಜೆಡಿಎಸ್ ನವರು ಬಿಜೆಪಿಗೆ ಸಹಾಯವಾಗಲಿ ಅಂತಾ ಅಲ್ಪಸಂಖ್ಯಾತರನ್ನು ಕಣಕ್ಕಿಳಿಸಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಒಳಒಪ್ಪಂದ ಮಾಡಿಕೊಂಡಿದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ ಜೆಡಿಎಸ್ ನವರು ಬಿಜೆಪಿಯನ್ನು ಯಾಕೆ ಟಾರ್ಗೆಟ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಇವರು ಯಾರು ನನಗೆ ಹೇಳೋಕೆ..? ಅವರು ಯಾವ ದೊಣ್ಣೆ ನಾಯಕ..? ಅವರ ಪರ್ಮಿಷನ್ ತಗೋಂಡು ಅಭ್ಯರ್ಥಿ ಹಾಕಬೇಕಾ? ಎಲ್ಲಿ ಯಾವ ಅಭ್ಯರ್ಥಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ. ಅವರಿಗೆ ಪರಿಜ್ಞಾನ ಇದ್ದರೆ ನನ್ನ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಬಾರದು ಎಂದು ಕಿಡಿಕಾರಿದರು.
ಇದೇ ವೇಳೆ ಆರ್ ಎಸ್ ಎಸ್ ಬಗ್ಗೆ ಮಾತನಾಡಿ, ಸ್ವಾತಂತ್ರ ಪೂರ್ವದ ಆರ್ಎಸ್ಎಸ್ ಬೇರೆ, ಈಗಿನ ಆರ್ಎಸ್ಎಸ್ ಬೇರೆ. ಈಗಿನ ಆರ್ಎಸ್ಎಸ್ ದೇಶವನ್ನು ಹಾಳು ಮಾಡುವ ಸಂಘಟನೆ. ದೇವೆಗೌಡರು ಹೇಳಿದ್ದು ಆರ್ಎಸ್ಎಸ್ ಸ್ವಾತಂತ್ರ ಪೂರ್ವದ ಸಂಘಟನೆ ಬಗ್ಗೆ ಎಂದಿದ್ದಾರೆ.