H3N2 ವೇರಿಯಂಟ್ ಪತ್ತೆ; ತಜ್ಞರೊಂದಿಗೆ ಸಭೆ ನಡೆಸಿದ ಆರೋಗ್ಯ ಸಚಿವ…
ಕೋವಿಡ್ ಅಷ್ಟು ಬೇಗ ನಮ್ಮಿಂದ ದೂರವಾಗುವುದಿಲ್ಲ ಎನ್ನವುದು ಪದೆ ಪದೆ ಸತ್ಯವಾಗುತ್ತಿದೆ. ದೇಶದ ಹಲವೆಡೆ ಕೋವಿಡ್ ನ ಹೊಸತೊಂದು ವೇರಿಯಂಟ್ ಪತ್ತೆಯಾಗಿದೆ. ಹಲವು ರಾಜ್ಯಗಳಲ್ಲಿ H3N2 ವೇರಿಯಂಟ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಸಹ ಸಭೆ ನಡೆಸಿ ಮಾತನಾಡಿದ್ದಾರೆ.
ಈ ಕುರಿತು ಮಾತನಾಡಿದ ಸುಧಾಕರ್ H3N2 ಪ್ರಕರಣಗಳು ವರದಿಯಾಗುತ್ತಿವೆ ಆದರೆ ಗಾಬರಿ ಪಡುವ ಯಾವುದೇ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ. ಇದೇ ವೇಳೆ ಪ್ರತ್ಯೆಕ ಮಾರ್ಗಸೂಚಿಗಳನ್ನ ಪ್ರಕಟ ಮಾಡಿದ್ದಾರೆ.
ಆರೋಗ್ಯ ಸಚಿವರು ತಿಳಸಿರುವ ಮಾಹಿತಿ ಪ್ರಕಾರ….
- ಎಲ್ಲಾ ಹೆಲ್ತ್ ಕೇರ್ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ವ್ಯಾಕ್ಸೀನ್ ತೆಗೆದುಕೊಳ್ಳಬೇಕು. ವರ್ಷದಲ್ಲಿ ಒಂದು ಬಾರಿ ಲಸಿಕೆ ಪಡೆಯುವುದು ಕಡ್ಡಾಯ.
- ಕೇಂದ್ರ ಸರ್ಕಾರ ಪ್ರತಿವಾರ 25 ಸ್ಯಾರಿ, ILR ಟೆಸ್ಟ್ ಮಾಡಲು ಸೂಚಿಸಿದೆ
- 15 ವರ್ಷದ ಕೆಳಗಿನ ಮಕ್ಕಳಿಗೆ ಈ ವೇರಿಯೆಂಟ್ ಅಪಾಯ ಇದೆ, ಮಕ್ಕಳು ಶಾಲೆಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳುವುದರಿಂದ ಅಪಾಯ ಹೆಚ್ಚು.
- 65 ವರ್ಷ ಮೇಲ್ಪಟ್ಟ ವಯೋವೃದ್ದರು, ಗರ್ಭಿಣಿಯರಿಗೂ ಅಪಾಯ ಇದೆ
- ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡಬೇಕು, ಸೀನುವಾಗ ಕೆಮ್ಮುವಾಗ ಮಾಸ್ಕ್ ಹಾಕಬೇಕು, ಸಾರ್ವಜನಿಕ ಅಂತರ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಬೇಸಿಗೆ ಮತ್ತು ತಾಪಮಾನ ಹೆಚ್ಚಳದ ಕುರಿತು ಚರ್ಚಿಸಿರುವುದಗಿ ಆರೋಗ್ಯ ಸಚಿವರು ತಿಳಿಸಿದ್ದು, ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ಪ್ರತಿದಿನ ಕನಿಷ್ಠ 2-3 ಲೀಟರ್ ನೀರು ಸೇವಿಸುವುದು ಮತ್ತು ಆಹಾರದಲ್ಲಿ ಮಜ್ಜಿಗೆ ಎಳನೀರು , ನಿಂಬೆಹಣ್ಣಿನ ಪಾನಕ ಸೇವಿಸಲು ಸಲಹೆ ನೀಡಿರುವುದಾಗಿ ತಿಳಿಸಿದ್ದಾರೆ.
H3N2 variant detection; Health Minister held a meeting with experts…