ಹಾಸನ : ನಗರದಲ್ಲಿ (Hassana) ಹಾಡಹಗಲೇ ಶೂಟೌಟ್ (Shootout) ನಡೆದಿದ್ದು, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ನಗರದ ಹೊಯ್ಸಳ ನಗರದಲ್ಲಿ ಈ ಘಟನೆ ನಡೆದಿದೆ. ಓರ್ವ ವ್ಯಕ್ತಿ ಮತ್ತೊಬ್ಬನಿಗೆ ಗುಂಡು ಹಾರಿಸಿ, ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಮೊಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿದೆ
ಹಾಸನದ ಶರಫತ್ ಅಲಿ, ಬೆಂಗಳೂರಿನ ಆಶಿಫ್ ಸಾವನ್ನಪ್ಪಿದ ಯುವಕರು ಎನ್ನಲಾಗಿದೆ. ನಿವೇಶನದ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ವೈಷಮ್ಯ ಇತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಾತುಕತೆ ನಡೆಸಲು ಬಂದಾಗ ಗಲಾಟೆ ನಡೆದು ವಿಕೋಪಕ್ಕೆ ಹೋಗಿದೆ. ಹೀಗಾಗಿ ಶೂಟೌಟ್ ನಡೆಸಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಮಾತನಾಡಿರುವ ಎಸ್ಪಿ ಮೊಹಮದ್ ಸುಜೇತಾ, ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಬ್ಬರು ಶೂಟ್ ಮಾಡಿ, ಇನ್ನೊಬ್ಬರು ತಾನೇ ಶೂಟ್ ಮಾಡ ಹತ್ಯೆ ಮಾಡಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಶರಫತ್ ಅಲಿಗೆ ಗುಂಡು ಹಾರಿಸಿ ನಂತರ ಕಾರಿನಲ್ಲೇ ಆಶಿಫ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.