ಭಾರತೀಯ ಚಿತ್ರರಂಗದ ಶಿವಗಾಮಿಗೆ ಜನ್ಮದಿನದ ಸಂಭ್ರಮ

1 min read
ramya krishna saaksha tv

ಭಾರತೀಯ ಚಿತ್ರರಂಗದ ಶಿವಗಾಮಿಗೆ ಜನ್ಮದಿನದ ಸಂಭ್ರಮ

ನೀಲಾಂಬರಿಯಾಗಿ ಜನರ ಮೆಚ್ಚುಗೆ ಪಡೆದು ಶಿವಗಾಮಿಯಾಗಿ ಭಾರತೀಯ ಸಿನಿ ದುನಿಯಾವನ್ನಾಳಿದ ಬಹು ಭಾಷಾ ನಟಿ ರಮ್ಯಾ ಕೃಷ್ಣನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

1992 ರಿಂದ 2000 ವರೆಗೂ ಹಲವಾರು ಭಾಷೆಗಳಲ್ಲಿ ನಟಿಸಿ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿದ್ದ ರಮ್ಯಾ ಕೃಷ್ಣನ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಅಭಿನಯ ಮೂಲಕವೇ ಸಿನಿಪ್ರಿಯರ ಮನ ಗೆದ್ದಿರುವ ರಮ್ಯಾ ಕೃಷ್ಣನ್ ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಖೇನ ಶುಭ ಕೋರುತ್ತಿದ್ದಾರೆ.

ಸದ್ಯ ರಮ್ಯಾ ಕೃಷ್ಣನ್ ಅವರಿಗೆ ವಯಸ್ಸು 50ರ ಗಡಿ ದಾಟಿದರೂ ಈಗಿನ ನಟಿಯರನ್ನು ನಾಚಿಸುವಂತಹ ಮಾಸದ ಸೌಂದರ್ಯ ಅವರದ್ದಾಗಿದೆ.

ಸದ್ಯ ರಮ್ಯಾ ಕೃಷ್ಣನ್ ಅವರು ಬೆಳ್ಳಿ ತೆರೆ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಪೌರಾಣಿಕ, ಗ್ಲಾಮರಸ್, ಪೋಷಕ ಹಾಗೂ ಬೋಲ್ಡ್ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್ ಅವರು ಈಗಲೂ ಸಹ ನಟಿಸುತ್ತಿದ್ದಾರೆ.

ramya krishna saaksha tv

ಅಂದಹಾಗೆ ರಮ್ಯಾ ಅವರು 15 ಸೆಪ್ಟೆ0ಬರ್ 1970ರಂದು ಚೆನ್ನೈನಲ್ಲಿ ಜನಸಿದರು. ತ0ದೆ ಕೃಷ್ಣನ್ ಹಾಗೂ ತಾಯಿ ಮಾಯಾ.

ಇವರು ಭರತನಾಟ್ಯ0,ಕೂಚಿಪೂಡಿ ಹಾಗೂ ಮು0ತಾದ ನೃತ್ಯ ರೂಪುಗಳಲ್ಲಿ ತರಬೇತಿಯನ್ನು ಪಡೆದು ಹಲವಾರು ಹ0ತದ ಪ್ರದರ್ಶನಗಳನ್ನು ನೀಡಿದ್ದಾರೆ. ರಮ್ಯಾ ರವರು ತೆಲುಗು ಚಲನಚಿತ್ರದ ನಿರ್ದೇಶಕ ಕೃಷ್ಣ ವ0ಶಿ ರವರನ್ನು 12 ಜೂನ್ 2003 ರ0ದು ಮದುವೆಯಾದರು.

ರಮ್ಯಾ ಕೃಷ್ಣ ಅವರು 1984ರಲ್ಲಿ ವೈ.ಜಿ ಮಹೇ0ದ್ರ ಜೊತೆ “ವೆಲ್ಲಿ ಮನಸ್ಸು” ಎ0ಬ ತಮಿಳು ಚಿತ್ರಕ್ಕಾಗಿ 14 ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದರು. ಇಲ್ಲಿಂದ ಅವರ ಸಿನಿ ಪ್ರಯಾಣ ಆರಂಭವಾಯಿತು. ಅವರ ಮೊದಲ ತೆಲುಗು ಚಿತ್ರ “ಭಲೆ ಮಿತ್ರುಲು”. ಇವರು ಕನ್ನಡದಲ್ಲಿ ರವಿಚಂದ್ರನ್, ಪುನೀತ್ ರಾಜ್‍ಕುಮಾರ್,ಉಪೇಂದ್ರ ಹಾಗೂ ಮು0ತಾದ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನೀಲಾಂಬರಿ ಸಿನಿಮಾ ಮೂಲಕ ರಮ್ಯಾ ಕೃಷ್ಣ ಕನ್ನಡಿಗರ ಮನೆಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd