ಆಸ್ಪತ್ರೆಯಲ್ಲಿ ರೋಗಿಗೆ ಕಂಪೌಂಡರ್ ಕಿರುಕುಳ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳಾ ರೋಗಿಯೊಬ್ಬರು ಡೆಂಗ್ಯೂ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ರಾತ್ರಿ ವೇಳೆ ರೋಗಿಗಳೆಲ್ಲ ಮಲಗಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಹಿಳೆ ಮಲಗಿದ್ದ ಸಂದರ್ಭದಲ್ಲಿ ಹಾಸಿಗೆಯ ಪಕ್ಕದಲ್ಲಿ ಕಾಂಪೌಂಡರ್ ನಿಂತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶೋಯೆಬ್ ಎಂಬ ಆಸ್ಪತ್ರೆಯ ಕಂಪೌಂಡರ್ ಆಕೆ ಮಲಗಿದ್ದಾಗ ಆಕ್ಷೇಪಾರ್ಹ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಬೆಡ್‌ಶೀಟ್‌ನೊಳಗೆ ಕೈಕಾಲುಗಳು, ಸೊಂಟ ಮುಟ್ಟಿದ್ದಾನೆ ಎಂದು ರೋಗಿ ದೂರು ನೀಡಿದ್ದಾರೆ. ಅಲ್ಲದೇ, ಕಂಪೌಂಡರ್ ಕೂಡ ಇದನ್ನು ಒಪ್ಪಿಕೊಂಡಿದ್ದಾನೆ ಎಂತು ತಿಳಿದು ಬಂದಿದೆ.








