ಹಾರ್ದಿಕ್ ಪಾಂಡ್ಯ ಸಂಚಲನ ನಿರ್ಣಯ.. ಟೀಂ ಇಂಡಿಯಾಗೆ..
ಐಸಿಸಿ ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಸಂಚಲನ ನಿರ್ಣಯ ತೆಗೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಕೆರಿಯರ್ ಸಂಕಷ್ಟಕ್ಕೆ ಸಿಲುಕಿದೆ.
ಬೌಲಿಂಗ್ ನಲ್ಲಿ ಆಸಕ್ತಿ ತೋರದ ಹಾರ್ದಿಕ್, ಬ್ಯಾಟಿಂಗ್ ನಲ್ಲೂ ಅಬ್ಬರಿಸುತ್ತಿಲ್ಲ. ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು.
ಬ್ಯಾಟಿಂಗ್ ನಲ್ಲಿ ವಿಧ್ವಂಸವನ್ನು ಸೃಷ್ಠಿಸುತ್ತಿದ್ದ ಪಾಂಡ್ಯ, ಬೌಲಿಂಗ್ ನಲ್ಲಿ ಎದುರಾಳಿಗಳನ್ನ ಕಾಡುತ್ತಿದ್ದರು. ಅವರ ಫೀಲ್ಡಿಂಗ್ ಕೂಡ ಭಾರತಕ್ಕೆ ವರದಾನವಾಗಿತ್ತು.
ಆದ್ರೆ ಇಂಜೂರಿ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ಹಾರ್ದಿಕ್ ಮತ್ತೆ ತಂಡಕ್ಕೆ ವಾಪಸ್ ಆದ್ರೂ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಟಿ 20 ಮತ್ತು ಟೆಸ್ಟ್ ಸರಣಿಯಿಂದ ಅವರನ್ನು ಕೈಬಿಡಲಾಗಿದೆ.
ಈ ಮಧ್ಯೆ ಟೀಂ ಇಂಡಿಯಾ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಿದೆ. ಈ ನಿಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಅದೇನಂದರೇ ಅವರು ಸಂಪೂರ್ಣವಾಗಿ ಫಿಟ್ ಆಗುವವರೆಗೂ ತಮ್ಮನ್ನು ಆಯ್ಕೆಗೆ ಪರಿಗಣಿಸಬೇಡಿ ಎಂದು ಆಯ್ಕೆದಾರರನ್ನು ಕೇಳಿಕೊಂಡಿದ್ದಾರೆ.
ಈ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡುತ್ತಿದೆ.









