Haripriya : ವಸಿಷ್ಠ ಸಿಂಹದ ತೋಳಲ್ಲಿ ಹರಿಪ್ರಿಯೆ….
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ತಾರಾ ಜೋಡಿಯ ಮದುವೆ ಸದ್ದು ಮಾಡುತ್ತಿದೆ. ಕಂಚಿನ ಕಠದ ಬಹುಮುಖ ಪ್ರತಿಭೆ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯ ಗುಟ್ಟಾಗಿ ಎಂಗೇಜ್ ಮೇಂಟ್ ಮಾಡಿಕೊಂಡಿರುವುದು ಗೋತ್ತೇ ಇದೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದ್ಲಲಿಯಷ್ಟೆ ನಿಶ್ಚಿತಾರ್ಥ ನಡೆದಿದೆ.
ಇವರಿಬ್ಬರೂ ಎಂಗೇಜ್ ಆಗಿರುವ ಸುದ್ದಿಯನ್ನ ತುಂಬಾ ಕ್ರಿಯೇಟಿಯವ್ ಆಗಿ ಸೋಶೀಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹರಿಪ್ರಿಯ ಹಂಚಿಕೊಂಡಿರುವ ಪೋಟೋದಲ್ಲಿ ನರಸಿಂಹದವತಾರದ ಕೈಯಲ್ಲಿ ಮುದ್ದು ಲಕ್ಷಿ ಇರುವಂತೆ ಪೋಟೋ ಇದ್ದು ಸಿಂಹ ಕೈಯಲ್ಲಿ ಹರಿಯ ಪ್ರಿಯೆ ಇದ್ದಾಳೆ ಎನ್ನುವಂಥಹ ಅರ್ಥ ಬರುವಂತೆ ಪೊಟೋ ಹಂಚಿಕೊಂಡಿದ್ದಾರೆ.
ಈ ಪೋಟೋ ಗೆ ಚಿನ್ನ ನಿನ್ನ ತೋಳಿನಲ್ಲಿ ಕಂದಾ ನಾನು ಎಂಬ ಮುದ್ದಾದ ಕ್ಯಾಪ್ಶನ್ ನೀಡಿದ್ದಾರೆ. ವಸಿಷ್ಠ ಸಿಂಹ ಇದೇ ಪೋಟೋ ಹಂಚಿಕೊಂಡಿದ್ದು ಇವರಿಬ್ಬರ ಪ್ರೀತಿ ಖಚಿತವಾಗಿದೆ.
haripriya shares creative photo to confirm engagement