ಕುಂಬಳಕಾಯಿ ಒಡೆದ “ಹರೀಶ ವಯಸ್ಸು 36” ಸಿನಿಮಾ ತಂಡ..!
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಪ್ರೇಕ್ಷರನ್ನ ಮೋಡಿ ಮಾಡುತ್ತಿದೆ.. ಅದೇ ರೀತಿ ಮತ್ತೆ ಸಿನಿ ಪ್ರೇಕ್ಷಕರನ್ನು ಮೋಡಿ ಮಾಡಲು ಬರುತ್ತಿದೆ “ಹರೀಶ ವಯಸ್ಸು 36” ಸಿನಿಮಾ ತಂಡ.. ವಿಶೇಷ ಕಥಾ ಹಂದರ ಹೊಂದಿರುವ , ವಿಭಿನ್ನ ಟೈಟಲ್ ಮೂಲಕವೇ ಜನರ ಗಮನ ಸೆಳೆದಿರುವ ಈ ಸಿನಿಮಾದ ಶೂಟಿಂಗ್ ಮುಗಿದಿದೆ.. ಕರಾವಳಿ ಭಾಗದಲ್ಲಿ ಚಿತ್ರೀಕರಣ ನಡೆದಿದೆ..
ಸಿನಿಮಾದಲ್ಲಿ ಸೈಮಾ ಪ್ರಶಸ್ತಿ ವಿಜೇತ ಪ್ರಕಾಶ್ ತಾಮಿನಾಡು , ಹಿರಿಯ ಕಲಾವಿದ ಉಮೇಶ್ , ಯೋಗೇಶ್ ಶೆಟ್ಟಿ, ಶ್ವೇತಾ ಅರೆಹೊಳೆ , ಉಮೇಶ್ ಮಿಜಾರ್, ಶೋಭಾ ಶೆಟ್ಟಿ , ಮಂಜುಳಾ ಜನಾರ್ಧನ್ , ರಾಜೇಶ್ ಸ್ಕೈಲಾರ್ಕ್ , ರಕ್ಷಣ್ ಮಾಡೂರ್ ಸೇರಿದಂತೆ ಅನೇಕರ ತಾರಾಬಳಗವಿದೆ.. ಈ ಸಿನಿಮಾ ಗುರುರಾಜ್ ಜೇಷ್ಠ ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.. ಜೊತೆಗೆ ಅವರದ್ದೇ ಸಂಗೀತ ಸಿನಿಮಾಗಿರೋದು ವಿಶೇಷ.. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಿದೆ.. ಸಿನಿಮಾಗೆ ಮೋಹನ್ ಪಡ್ರೆ , ಪಾಲಕ್ಕಾಡ್ ಅವರ ಛಾಯಾಗ್ರಹಣವಿದೆ..