Harshal Patel | ಹರ್ಷಲ್ ವಾಪಸ್ ಬಂದ್ರೂ ಆಡೋದು ಡೌಟು..!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಬಿಕಸ್ತ ಬೌಲರ್ ಹರ್ಷಲ್ ಪಟೇಲ್ ಬಯೋಬಬಲ್ ಬಿಟ್ಟು ಮನೆಗೆ ತೆರಳಿದ್ದಾರೆ. ಹರ್ಷಲ್ ಅವರ ಸಹೋದರಿ ಕೊನೆಯುಸಿರೆಳೆದ ಕಾರಣ ಅವರು ಏಕಾಏಕಿ ಮನೆಗೆ ದೌಡಾಯಿಸಿದ್ದಾರೆ.
ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರಿ ಸಾವನ್ನಪ್ಪಿರುವ ಸುದ್ದಿ ಹರ್ಷಲ್ ಗೆ ನೋವುಂಟು ಮಾಡಿದೆ. ಹೀಗಾಗಿ ಮುಂಬೈ ವಿರುದ್ಧ ದ ಪಂದ್ಯ ಮುಗಿದ ಬಳಿಕ ಹರ್ಷಲ್ ತವರಿಗೆ ಮರಳಿದ್ದಾರೆ.
ಶನಿವಾರ ನಡೆದ ಡಬಲ್ ಹೆಡರ್ ಪಂದ್ಯದಲ್ಲಿ, ಬೆಂಗಳೂರು ತಂಡ ಅಮೋಘ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ಗೆ ಸೋಲು ಉಣಿಸಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಸಂಘಟಿತ ಆಟದ ಪ್ರದರ್ಶನವನ್ನು ನೀಡಿ ಗಮನ ಸೆಳೆಯಿತು. ಮೊದಲು ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿತು. ಅದರಲ್ಲೂ ಹರ್ಷಲ್ ಪಟೇಲ್ ಮುಂಬೈ ಬ್ಯಾಟರ್ ಗಳಿಗೆ ಕಡಿವಾಣ ಹಾಕಿದ್ರು. ಪಂದ್ಯದಲ್ಲಿ ನಾಲ್ಕು ಓವರ್ ಗಳನ್ನ ಎಸೆದ ಹರ್ಷಲ್ ಪಟೇಲ್ 23 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು.
ಈ ಪಂದ್ಯ ಮುಗಿಯುತ್ತಿದ್ದಂತೆ ಹರ್ಷಲ್ ಗೆ ಸಹೋದರಿ ಸಾವಿನ ಸುದ್ದಿ ತಿಳಿದಿದ್ದು, ಕೂಡಲೇ ಬಯೋಬಬಲ್ ಬಿಟ್ಟು ಮನೆಗೆ ಹೋಗಿದ್ದಾರೆ. ಮೂಲಗಳ ಪ್ರಕಾರ ಅವರು ಒಂದು ದಿನದ ಮಟ್ಟಿಗೆ ತವರಿಗೆ ಹೋಗಿದ್ದಾರೆ.
ಹೀಗಾಗಿ ಅವರು ಮತ್ತೆ ಆದಷ್ಟು ಬೇಗ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಆದ್ರೆ ಅವರು ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ.
ಹೌದು..! ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಐಪಿಎಲ್ ಆಟಗಾರರು ಕಟ್ಟುನಿಟ್ಟಿನ ಬಯೋಬಬಲ್ ನಲ್ಲಿ ಇದ್ದಾರೆ. ಹೊರಗಿನಿಂದ ಆಟಗಾರರು ಬಂದರೂ ಅವರು ಮೂರು ದಿನಗಳ ಕಾಲ ಕಾರಂಟೈನ್ ಇರಬೇಕಾಗುತ್ತದೆ. ಈ ನಿಯಮದ ಅನ್ವಯ ಹರ್ಷಲ್ ಪಟೇಲ್ ಈಗ ತಂಡಕ್ಕೆ ಬಂದರೂ ಒಂದೆಡೆರು ಪಂದ್ಯಗಳಿಂದ ದೂರ ಇರಬೇಕಾಗುತ್ತದೆ.
ಮುಖ್ಯವಾಗಿ ಸೇಡಿನ ಸಮರವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಿಂದ ಹರ್ಷಲ್ ಪಟೇಲ್ ದೂರ ಇರಲಿದ್ದಾರೆ. ಇದು ಆರ್ ಸಿಬಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಯಾಕಂದರೇ ಹರ್ಷಲ್ ಪಟೇಲ್ ಆರ್ ಸಿಬಿ ತಂಡದ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಕೊನೆಯ ಓವರ್ ಗಳಲ್ಲಿ ತಂಡಕ್ಕೆ ಬ್ರೇಕ್ ತಂದು ಕೊಡೋದು, ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕೋದು, ವಿಕೆಟ್ ತೆಗೆದು ತಂಡಕ್ಕೆ ಮುನ್ನಡೆ ತಂದು ಕೊಡೋದು ಹರ್ಷಲ್ ಪಟೇಲ್ ರ ವಿಶೇಷತೆಯಾಗಿತ್ತು. harshal patel’s sister’s death RCB IPL 2022
ಇದೀಗ ಅವರು ತಂಡದಿಂದ ದೂರ ಇರುವುದರಿಂದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಹೊಸಬರಿಗೆ ಮಣೆ ಹಾಕಲೇಬೇಕಾಗುತ್ತದೆ. ಇದು ತಂಡದ ಮ್ಯಾನೆಜ್ ಮೆಂಟ್ ಗೆ ತಲೆ ನೋವು ಉಂಟುಮಾಡಿದೆ. ಹರ್ಷಲ್ ಬದಲು ಸಿದ್ಧಾರ್ಥ್ ಕೌಲ್ ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.









