ಕಿಚ್ಚನ ಫೋಟೋಗೆ ಪೂಜೆ ಮಾಡಿ ಶಿವರಾತ್ರಿ ಆಚರಿಸಿದ ಯುವಕ
ಹಾವೇರಿ : ಸ್ಯಾಂಡಲ್ ವುಡ್ ನ ಬಾದ್ ಶಾ ಕಿಚ್ಚ ಸುದೀಪ್ ಫೋಟೊಗೆ ಪೂಜೆ ಸಲ್ಲಿಸುವುದರ ಮೂಲಕ ಯುವಕನೊರ್ವ ಶಿವರಾತ್ರಿ ಆಚರಣೆ ಮಾಡಿರುವ ಘಟನೆ ಹಾವೇರಿಯ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರವಿ ಕರಿಯಮ್ಮನವರ್ ಎಂಬ ಯುವಕ ಕಿಚ್ಚ ಸುದೀಪ್ ನ ಅಪ್ಪಟ ಅಭಿಮಾನಿಯಾಗಿದ್ದು, ಶಿವನ ಫೋಟೋ ಜೊತೆಗೆ ಕಿಚ್ಚನ ಫೋಟೋಗೆ ಪೂಜೆ ಸಲ್ಲಿಸಿ ಶಿವರಾತ್ರಿ ಹಬ್ಬ ಆಚರಣೆ ಮಾಡಿದ್ದಾನೆ.
ರವಿ ತನ್ನ ಚಿಕ್ಕ ವಯಸ್ಸಿನಲ್ಲೇಯೇ ಸುದೀಪ್ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದು, ತನ್ನ ಮನೆಯ ತುಂಬೆಲ್ಲ ಸುದೀಪ್ ಅವರ ಭಾವಚಿತ್ರಗಳೇ ರಾರಾಜಿಸುತ್ತಿವೆ.
ಶಿವರಾತ್ರಿ ದಿನದಲ್ಲಿ ಕಿಚ್ಚನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.