ADVERTISEMENT
Thursday, January 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಧಾರಾವಾಹಿಗಳು ಕಲಿಸುವುದು ಮನೆಹಾಳ ಬುದ್ಧಿ ಮಾತ್ರ ಮಹಿಳೆಯರಿಗೆ ಹಾವೇರಿ ಎಸ್‌ಪಿ ಯಶೋಧಾ ಖಡಕ್ ಕಿವಿಮಾತು

Haveri SP Yashoda Khadak says that serials only teach women the wisdom of homelessness

Shwetha by Shwetha
December 29, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಹಾವೇರಿ: ಕಿರುತೆರೆಯ ಧಾರಾವಾಹಿಗಳು ಮಹಿಳೆಯರ ಮನಸ್ಥಿತಿಯ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಇತಿಹಾಸ ಪ್ರಸಿದ್ಧ ಶ್ರೀ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಮಾತನಾಡಿದ ಅವರು, ಧಾರಾವಾಹಿಗಳು ಮಹಿಳೆಯರಿಗೆ ಕೇವಲ ಮನೆಹಾಳ ಬುದ್ಧಿಯನ್ನು ಕಲಿಸುತ್ತಿವೆ ಎಂಬ ಆಕ್ರೋಶದ ಮಾತುಗಳನ್ನಾಡಿದ್ದು, ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.

ಅದ್ದೂರಿಯಾಗಿ ನಡೆದ ಹುಕ್ಕೇರಿ ಮಠದ ಜಾತ್ರಾ

Related posts

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

January 22, 2026
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

January 22, 2026

ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್‌ಪಿ ಯಶೋಧಾ ಅವರು, ಇಂದಿನ ದಿನಗಳಲ್ಲಿ ಮನೆಯ ಹೆಣ್ಣುಮಕ್ಕಳು ಟಿವಿ ಧಾರಾವಾಹಿಗಳಿಗೆ ಅದೆಷ್ಟು ದಾಸರಾಗಿದ್ದಾರೆಂದರೆ, ಅದು ಅವರ ಜೀವನಶೈಲಿ ಮತ್ತು ಮಕ್ಕಳ ಭವಿಷ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಸಿದರು.

ಕಳ್ಳತನವಾದರೂ ಗೊತ್ತಾಗದಷ್ಟು ಅಡಿಕ್ಷನ್

ತಮ್ಮ ಪೊಲೀಸ್ ವೃತ್ತಿಜೀವನದ ಅನುಭವವನ್ನು ಉಲ್ಲೇಖಿಸಿದ ಅವರು, ಧಾರಾವಾಹಿಗಳ ಗೀಳು ಭದ್ರತೆಯ ಮೇಲೂ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ವಿವರಿಸಿದರು. ಮಹಿಳೆಯರು ಟಿವಿ ಪರದೆಗೆ ಅಂಟಿಕೊಂಡು ಕೂತಾಗ, ಮನೆಯ ಹಿಂಬಾಗಿಲಿಂದ ಕಳ್ಳರು ಬಂದು ಕಳ್ಳತನ ಮಾಡಿಕೊಂಡು ಹೋದರೂ ಇವರಿಗೆ ತಿಳಿಯುವುದಿಲ್ಲ. ಧಾರಾವಾಹಿಗಳಿಗೆ ಮಹಿಳೆಯರು ಅಷ್ಟರಮಟ್ಟಿಗೆ ಅಡಿಕ್ಟ್ ಆಗಿದ್ದಾರೆ. ಇಂತಹ ಅನೇಕ ಪ್ರಕರಣಗಳನ್ನು ನಾವು ನೋಡಿದ್ದೇವೆ ಎಂದು ಎಸ್‌ಪಿ ಯಶೋಧಾ ವಿಷಾದ ವ್ಯಕ್ತಪಡಿಸಿದರು. ಧಾರಾವಾಹಿ ತಂಡದವರು ನನ್ನ ಮೇಲೆ ಬೇಸರಗೊಂಡರೂ ಪರವಾಗಿಲ್ಲ, ಆದರೆ ಸತ್ಯವನ್ನು ಹೇಳಲೇಬೇಕು ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಮಕ್ಕಳ ಭವಿಷ್ಯಕ್ಕೆ ಅಮ್ಮಂದಿರೇ ರೋಲ್ ಮಾಡೆಲ್ ಆಗಲಿ

ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಪೋಷಕರ ದ್ವಂದ್ವ ನೀತಿಯನ್ನು ಎಸ್‌ಪಿ ಪ್ರಶ್ನಿಸಿದರು. ತಾಯಂದಿರೇ ಟಿವಿ ಮುಂದೆ ಕುಳಿತು ಧಾರಾವಾಹಿ ನೋಡುತ್ತಾ, ಮಕ್ಕಳಿಗೆ ಓದಲು ಹೇಳಿದರೆ ಅವರ ಮನಸ್ಸು ಓದಿನ ಕಡೆಗೆ ಹೇಗೆ ಹರಿಯುತ್ತದೆ? ಎಂದು ಪ್ರಶ್ನಿಸಿದರು. ನೀವು ಮಕ್ಕಳನ್ನು ಬಲವಂತವಾಗಿ ಓದಿಸುವ ಬದಲು, ನೀವೇ ಕೈಯಲ್ಲಿ ವಚನಗಳ ಪುಸ್ತಕವನ್ನೋ ಅಥವಾ ಕಾದಂಬರಿಗಳನ್ನೋ ಹಿಡಿದು ಓದುತ್ತಾ ಕುಳಿತುಕೊಳ್ಳಿ. ತಾಯಿಯನ್ನು ನೋಡಿ ಮಗು ತನ್ನಷ್ಟಕ್ಕೇ ಕಲಿಯುತ್ತದೆ. ಪಾಠ ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಮಕ್ಕಳ ಬದುಕು ಉಜ್ವಲವಾಗಬೇಕೆಂದರೆ ಮೊದಲು ತಾಯಂದಿರು ಬದಲಾಗಬೇಕು ಎಂದು ಸಲಹೆ ನೀಡಿದರು.

ಇಂಗ್ಲಿಷ್ ಮೀಡಿಯಂ ವ್ಯಾಮೋಹ ಬೇಡ

ಶಿಕ್ಷಣ ಮತ್ತು ಸಂಸ್ಕಾರದ ಕುರಿತು ಮಾತನಾಡಿದ ಅವರು, ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಾಕ್ಷಣ ಮಕ್ಕಳು ಸಾಧನೆ ಮಾಡುತ್ತಾರೆ ಎಂಬುದು ತಪ್ಪು ಕಲ್ಪನೆ. ಕನ್ನಡ ಮಾಧ್ಯಮದಲ್ಲಿ ಓದಿಯೂ ಉನ್ನತ ಸಾಧನೆ ಮಾಡಲು ಸಾಧ್ಯವಿದೆ. ಪ್ರತಿಯೊಬ್ಬರೂ ಫಸ್ಟ್ ರ್ಯಾಂಕ್ ಬರುವುದು ಸಾಧ್ಯವಿಲ್ಲ ಮತ್ತು ಅದರ ಅವಶ್ಯಕತೆಯೂ ಇಲ್ಲ. ಇತ್ತೀಚೆಗೆ ಶಾಲೆಯೊಂದರ ಪೋಷಕರ ಸಭೆಯಲ್ಲಿ ಪಾಲಕರು ಶಿಕ್ಷಕರನ್ನು ಕೇಳುತ್ತಿದ್ದ ಪ್ರಶ್ನೆಗಳನ್ನು ಕೇಳಿ ನನಗೆ ಆಘಾತವಾಯಿತು. ಅಂಕಗಳಿಗಿಂತ ಮಿಗಿಲಾಗಿ ಮಕ್ಕಳಿಗೆ ಸಂಸ್ಕಾರ ಕಲಿಸಿ, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿಕೊಡಿ ಎಂದು ಕಿವಿಮಾತು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ

ಎಸ್‌ಪಿ ಯಶೋಧಾ ಅವರ ಈ ನೇರ ನುಡಿಗಳಿಗೆ ನೆರೆದಿದ್ದ ಜನಸ್ತೋಮದಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಒಂದೆಡೆ ಮನರಂಜನಾ ವಾಹಿನಿಗಳ ಆರ್ಭಟದಲ್ಲಿ ಮಹಿಳೆಯರು ಸಂಜೆಗತ್ತಲಾದರೆ ಟಿವಿ ಮುಂದೆ ತಪಸ್ಸು ಮಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಧಾರಾವಾಹಿಗಳ ನೈಜತೆಯನ್ನು ಬಿಚ್ಚಿಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಬಹುತೇಕರು ಎಸ್‌ಪಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, ಇದು ಇಂದಿನ ಅಗತ್ಯ ಸಂದೇಶ ಎಂದು ಶ್ಲಾಘಿಸಿದ್ದಾರೆ.

ShareTweetSendShare
Join us on:

Related Posts

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

by Shwetha
January 22, 2026
0

ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಟೋಲ್ ಶುಲ್ಕ ಬಾಕಿ ಇರುವ ವಾಹನಗಳು ವಾಹನ ಮಾಲೀಕತ್ವಕ್ಕೆ...

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

by Shwetha
January 22, 2026
0

ಭಾರತ ಮೂಲದ ಪ್ರಸಿದ್ಧ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ನಾಸಾದಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ್ದಾರೆ. ದಶಕಗಳ ಕಾಲ ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ...

RCB ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳು

RCB ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳು

by Shwetha
January 22, 2026
0

IPL ಪಂದ್ಯಗಳು ತಮ್ಮ ತವರು ನೆಲವಾದ ಬೆಂಗಳೂರಿನಲ್ಲೇ ನಡೆಯಬೇಕೆಂದು ಬಹುಕಾಲದಿಂದ ಕಾಯುತ್ತಿದ್ದ RCB ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ದೊರೆತಿದೆ. ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳನ್ನು...

ರಾಜ್ಯದ ಖಾಸಗಿ ಸ್ಲೀಪರ್ ಬಸ್‌ಗಳಿಗೆ ಮೂಗುದಾರ: ಪ್ರಯಾಣಿಕರ ಪ್ರಾಣರಕ್ಷಣೆಗೆ 8 ಕಠಿಣ ನಿಯಮಗಳು ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ

ರಾಜ್ಯದ ಖಾಸಗಿ ಸ್ಲೀಪರ್ ಬಸ್‌ಗಳಿಗೆ ಮೂಗುದಾರ: ಪ್ರಯಾಣಿಕರ ಪ್ರಾಣರಕ್ಷಣೆಗೆ 8 ಕಠಿಣ ನಿಯಮಗಳು ಜಾರಿ, ಉಲ್ಲಂಘಿಸಿದರೆ ಕಠಿಣ ಕ್ರಮ

by Shwetha
January 22, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಸರಣಿ ಬಸ್ ಅವಘಡಗಳು ಮತ್ತು ಅಗ್ನಿ ದುರಂತಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿದೆ. ಪ್ರಯಾಣಿಕರ...

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

by Shwetha
January 22, 2026
0

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ‘ಏರ್ ಫೋರ್ಸ್ ಒನ್’ ವಿಮಾನವು ಕೂದಲೆಳೆಯ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದೆ. ಟ್ರಂಪ್ ಅವರು ವಿಶ್ವ ಆರ್ಥಿಕ ವೇದಿಕೆ (World...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram