ಕಾರವಾರ:ಸಾಲದ ಬಾಧೆ ತಾಳಲಾರದೆ ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್ ಪಾಟೀಲ್(40), ಜ್ಯೋತಿ ಪಾಟೀಲ್(35), ದಕ್ಷ(12) ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಈ ದಂಪತಿ ಗೋವಾದ ಕುಕ್ಕಳ್ಳಿಯಲ್ಲಿ ವಾಸವಿದ್ದರು. ಸಾಲಬಾಧೆಯಿಂದ ಕುಟುಂಬದಿಂದಾಗಿ ಮನನೊಂದು ಶ್ಯಾಮ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಶ್ಯಾಮ್ ಮೊದಲು ಕಾರವಾರ ಕಾಳಿ ನದಿ ಬ್ರಿಜ್ ನಿಂದ ಪತ್ನಿ ಹಾಗೂ ಮಗನನ್ನು ದೂಡಿದ್ದಾರೆ ಎನ್ನಲಾಗುತ್ತಿದ್ದು, ದೇವಭಾಗದ ಕಡಲ ತೀರದಲ್ಲಿ ಜ್ಯೋತಿ ಹಾಗೂ ದಕ್ಷನ ಶವ ಪತ್ತೆಯಾಗಿದೆ.
ಉದ್ಯಮಿ ಶ್ಯಾಮ ಪಾಟೀಲ್ ದೇಹ ಗೋವಾದ ಕುಕಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾ ವೆರ್ನಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮವನ್ನು ಶ್ಯಾಮ್ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








