ಅಣ್ಣನಿಗೆ ಬುದ್ದಿ ಮಾತು ಹೇಳಿದ್ದೇ ತಪ್ಪಾಯ್ತು | ಕೊಲೆಯಾದ ತಮ್ಮ
ಯಾದಗಿರಿ: ತಮ್ಮ ಬುದ್ದಿ ಮಾತು ಹೇಳಿದನೆಂದು ಅಣ್ಣ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಂಪಾಡ ಗ್ರಾಮದಲ್ಲಿ ನಡೆದಿದೆ.
ದೇವಿಂದ್ರ ಚವ್ಹಾಣ್(28) ಮೃತ ದುರ್ದೈವಿ. ಘಟನೆ ಭಾನುವಾರ ರಾತ್ರಿ ನಡೆದಿದ್ದು, ನನ್ನು ಅಣ್ಣ ಜಯರಾಮ್ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಜಯರಾಮ್ ಹಾಗೂ ದೇವಿಂದ್ರ ಸಹೋದರರು ಯುಗಾದಿ ಹಿನ್ನೆಲೆ ಊರಿಗೆ ಬಂದಿದ್ದರು. ಈ ವೇಳೆ ಭಾನುವಾರ ರಾತ್ರಿ ದೇವಿಂದ್ರ ಹಾಗೂ ಜಯರಾಮ ನಡುವೆ ಜಗಳ ಪ್ರಾರಂಭವಾಗಿದೆ. ಈ ವೇಳೆ ದೇವಿಂದ್ರ ಜಮ್ಲಾನಾಯಕ ಮಕ್ಕಳ ಸಹವಾಸ ಮಾಡಬೇಡ ಎಂದು ಜಯರಾಮ್‍ಗೆ ಬುದ್ದಿ ಹೇಳಿದ್ದಾನೆ
ಬುದ್ದಿ ಮಾತು ಹೇಳಿದ್ದಕ್ಕೆ ಕೋಪಗೊಂಡ ಜಯರಾಮ್ ಕುಟುಂಬಸ್ಥರ ಮುಂದೆಯೇ ದೇವಿಂದ್ರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೆಪ್ ಆಗಿದ್ದಾನೆ. ಪ್ರಸ್ತುತ ಸ್ಥಳಕ್ಕೆ ಗುರುಮಠಕಲ್ ಪೊಲೀಸರ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.








