Crime: ಮುಖ್ಯೋಪಾಧ್ಯಾರ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆ

1 min read
Crime Saaksha Tv

ಮುಖ್ಯೋಪಾಧ್ಯಾರ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿ ಆತ್ಮಹತ್ಯೆ

ಭುವನೇಶ್ವರ:  ಮುಖ್ಯೋಪಾಧ್ಯಾರ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬಳು ಕಟ್ಟಡದ ಮಹಡಿ ಮೇಲಿನಿಂದ ಜಿಗಿದು ಆತ್ಮಹ ಮಾಡಿಕೊಂಡಿರುವ ಘಟನೆ ಒಡಿಶಾದ ಸುಂದರ್‌ಗಢ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಲೆಫ್ರಿಪಾಡಾ ಬ್ಲಾಕ್‍ನಲ್ಲಿರುವ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥನಿ ಹಾಸ್ಟೇಲ್ ಕಟ್ಟಡದ ಮಹಡಿ ಮೇಲಿಂದ ಜಿಗದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶ್ಯಾಮ್ ಸುಂದರ್ ಪಟೇಲ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಮುಖ್ಯೋಪಾಧ್ಯಾಯ ಶ್ಯಾಮ್ ಸುಂದರ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ಮನೆಯವರಿಗೆ ತಿಳಿಸಿದ್ದಳು.

ಮುಖ್ಯೋಪಾಧ್ಯಾಯರ ಲೈಂಗಿಕ ಕಿರುಕುಳ ತಾಳಲಾರದೇ ಮನನೊಂದ ವಿದ್ಯಾರ್ಥಿನಿ ಹಾಸ್ಟೆಲ್ ಕಟ್ಟಡದ ಟೆರೇಸ್‍ನಿಂದ ಜಿಗಿದಿದ್ದಾಳೆ. ಪರಿಣಾಮವಾಗಿ ತಲೆಗೆ ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸುಂದರ್‌ಗಢ್ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಮೃತಪಟ್ಟಿದ್ದಾಳೆ.

ಆರಂಭದಲ್ಲಿ ಶಾಲೆಯ ಅಧಿಕಾರಿಗಳು ಘಟನೆಯನ್ನು ಅಪಘಾತ ಎಂದು ಹೇಳಿದ್ದಾರೆ. ಆದರೆ ಇದು ಲೈಂಗಿಕ ಕಿರುಕುಳದ ಪರಿಣಾಮವಾಗಿದೆ ಎಂದು ಎಸ್‍ಪಿ ಹೇಳಿದರು. ಜೊತೆಗೆ ಈ ಬಗ್ಗೆ ಶಾಲೆಯ ಹಲವಾರು ವಿದ್ಯಾರ್ಥಿಗಳು ಸಹ ಮುಖ್ಯೋಪಾಧ್ಯಾಯರಿಂದ ಲೈಂಗಿಕ ಕಿರುಕುಳದ ಬಗ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮುಖ್ಯೋಪಾಧ್ಯಾಯ ಮತ್ತು ವಾರ್ಡನ್ ಅವರನ್ನು ಬಂಧಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd