Health Tips: ಮಕ್ಕಳಿಗೆ ಎಂತಹ ಆಹಾರ ನೀಡಬೇಕು.. Health Tips saaksha tv
ರೋಗನಿರೋಧಕ ಶಕ್ತಿಯನ್ನು ಬೆಳೆಸಲು ಮಕ್ಕಳಿಗೆ ಸರಿಯಾದ ಆಹಾರವನ್ನು ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ಕೋರೊನಾ ಮೂರನೇ ಅಲೆಯ ಅಪಾಯವು ಎದುರಾಗಿರುವಾಗ ಮತ್ತಷ್ಟು ಜಾಗರೂಕರಾಗಿರಬೇಕು. ಹಾಗೇ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು…
ಮೊಟ್ಟೆ
ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಮಕ್ಕಳಿಗೆ ಪ್ರತಿದಿನ ಒಂದು ಬೇಯಿಸಿದ ಮೊಟ್ಟೆಯನ್ನು ನೀಡಬೇಕು. ಮೊಟ್ಟೆ ಸ್ನಾಯು, ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಮಗುವಿನ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಎ ಮತ್ತು ಬಿ2 (ರೈಬೋಫ್ಲಾವಿನ್) ಮೊಟ್ಟೆಯಲ್ಲಿದೆ.
ಸೊಪ್ಪು
ಸೊಪ್ಪು, ನುಗ್ಗೆಕಾಯಿ, ಕೊತ್ತಂಬರಿ ಮತ್ತು ಪಾಲಾಕ್ ನಂತಹ ಆಹಾರವನ್ನು ಮಕ್ಕಳಿಗೆ ನೀಡಬೇಕು. ಇದರಿಂದ ಮಕ್ಕಳಿಗೆ ಫೈಬರ್ ಜೊತೆಗೆ ಕಬ್ಬಿಣ, ಸತು ಮತ್ತು ಖನಿಜಗಳು ಲಭಿಸುತ್ತವೆ.
ಮೊಸರು
ಮೊಸರು ಪ್ರೋಬಯಾಟಿಕ್ಸ್ ಮತ್ತು ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ. ಇದು ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅರಿಶಿನ
ಅರಿಶಿನ ಆಂಟಿ ಇನ್ ಫ್ಲೆಮೆಟರಿ ಗುಣಗಳನ್ನು ಹೊಂದಿದೆ. ಮಕ್ಕಳ ದೈನಂದಿನ ಆಹಾರದಲ್ಲಿ ಅರಿಶಿನವನ್ನು ಸೇರಿಸುವುದರಿಂದ ಅಸ್ತಮಾ ಮತ್ತು ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಒಣಗಿದ ಹಣ್ಣುಗಳು
ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ವಾಲ್ನಟ್ಸ್ ಮತ್ತು ಏಪ್ರಿಕಾಟ್ಗಳ ಹೆಚ್ಚಿನ ಸೇವನೆಯು ಮೆದುಳಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಿಹಿತಿಂಡಿ
ಮಕ್ಕಳಿಗೆ ಅತಿಯಾಗಿ ಸಿಹಿತಿಂಡಿಗಳು, ಸಕ್ಕರೆಯ ಆಹಾರಗಳಾದ ಹಣ್ಣಿನ ರಸಗಳು, ಚಾಕಲೇಟ್ಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ನೀಡಬಾರದು. ಇವು ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಸಾಕಷ್ಟು ನಿದ್ರೆ
ವಿಶೇಷವಾಗಿ ಮಕ್ಕಳು ಪ್ರತಿದಿನ ಸಾಕಷ್ಟು ನಿದ್ರೆ ಪಡೆಯಬೇಕು. ಬೆಳಿಗ್ಗೆ ಕನಿಷ್ಠ ಒಂದು ಗಂಟೆ ಬಿಸಿಲಿನಲ್ಲಿ ಆಟವಾಡಲು ಅವರನ್ನು ಪ್ರೋತ್ಸಾಹಿಸಬೇಕು.