Heart attack ಮಧ್ಯಪ್ರದೇಶದ ಜಬಲ್ಪುರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಶುಕ್ರವಾರ ಮಧ್ಯಾಹ್ನ ಜಬಲ್‌ಪುರದ ದಮೋಹ್ನಾಕಾದಲ್ಲಿ ಸಿಟಿ ಬಸ್‌ನೊಂದು ಕೆಂಪು ದೀಪದಲ್ಲಿ ನಿಂತಿದ್ದ ವಾಹನಗಳಿಗೆ ನುಗ್ಗಿದಾಗ ಈ ಅಪಘಾತ ಸಂಭವಿಸಿದೆ ಚಾಲಕನಿಗೆ ಹೃದಯಾಘಾತವಾದ್ದರಿಂದ ಬಸ್ ನಿಯಂತ್ರಣ ತಪ್ಪಿ ವಾಹನಗಳಿಗೆ ಗುದ್ದಿದೆ.
ಈ ದುರ್ಘಟನೆಯಲ್ಲಿ ಚಾಲಕನ ಜೊತೆಗೆ ಮತ್ತೋರ್ವ ವೃದ್ಧ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
CAUGHT ON CAMERA – A city bus in Madhya Pradesh’s Jabalpur ran into several vehicles, killing 2, after its driver died of sudden heart attack. #Jabalpur #MadhyaPradesh #Accident pic.twitter.com/MvOEq3lbHV
— TIMES NOW (@TimesNow) December 2, 2022
ಗೋಹಲ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ತಿವಾರಿ ಪ್ರಕಾರ, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮೆಟ್ರೋ ಬಸ್ ಅಧರ್ತಾಲ್‌ನಿಂದ ದಮೋಹ್ನಕ ಕಡೆಗೆ ಪ್ರಯಾಣಿಕರೊಂದಿಗೆ ಬರುತ್ತಿತ್ತು. ದಮೊಹ್ನಕದಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಸಿಟಿ ಬಸ್ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೆಡ್ ಸಿಗ್ನಲ್ ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನ ಸವಾರರು ಆಟೋ ರಿಕ್ಷಾ ಹಾಗೂ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ದ್ವಿಚಕ್ರ ವಾಹನಗಳನ್ನು ಎಳೆದುಕೊಂಡು ಸ್ವಲ್ಪ ದೂರ ಹೋದ ನಂತರ ಬಸ್ ನಿಂತಿತು. ಬಸ್‌ನ ವೇಗ ಕಡಿಮೆಯಿದ್ದ ಕಾರಣ ಡಿಕ್ಕಿ ಹೊಡೆದ ರಭಸಕ್ಕೆ ಪಕ್ಕಕ್ಕೆ ಬಿದ್ದಿದ್ದರಿಂದ ಆರು ಜನ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಬಸ್ ಚಾಲಕ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
#ହଠାତ୍_ଡ୍ରାଇଭରଙ୍କୁ_ଆସିଲା_ହାର୍ଟ_ଆଟାକ୍#ନିୟନ୍ତ୍ରଣ_ହରାଇ_ଲୋକଙ୍କ_ଉପରେ_ମାଡ଼ିଗଲା_ବସ୍
ଟ୍ରାଫିକ୍ ସିଗ୍ନାଲ୍ରେ ଛିଡ଼ା ହୋଇଥିବା ଲୋକଙ୍କ ଉପରେ ବସ୍ ମାଡ଼ିଯିବା ଯୋଗୁ ୨ ଜଣଙ୍କ ମୃତ୍ୟୁ ହୋଇଛି।
ଦେଖନ୍ତୁ, ମଧ୍ୟପ୍ରଦେଶର ଜବଲ୍ପୁରରେ ଘଟିଥିବା ଏହି ଭୟାନକ ଦୁର୍ଘଟଣା…#Accident #MadhyaPradesh pic.twitter.com/aCLyteJ03N— ଓଟିଭି (@otvkhabar) December 3, 2022
ಪೊಲೀಸರ ಪ್ರಕಾರ, ಹರ್ ದೇವ್ ಪಟೇಲ್ ಎಂಬ ವ್ಯಕ್ತಿ ಜಬಲ್‌ಪುರದಲ್ಲಿ ಆರ್‌ಟಿಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಅವರ ಸಾವು ಅವರ ಕುಟುಂಬದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.