ಹೃದಯಘಾತ ದಿಢೀರ್ ಎಂದು ಬರುವುದಿಲ್ಲ..! ಗ್ಯಾಸ್ಟ್ರಿಕ್ನಿಂದ ಎದೆನೋವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು
ಹೃದಯಾಘಾತ ದಿಢೀರ್ ಎಂದು ಸಂಭವಿಸುವುದಿಲ್ಲ. ಅದಕ್ಕೂ ಮುನ್ನ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಗ್ಯಾಸ್ಟ್ರಿಕ್ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.
ಇದು ಕೂಡ ಕೆಲವರಲ್ಲಿ ಹೃದಯಾಘಾತದ ಲಕ್ಷಣವಾಗಿರಬಹುದು.
ಗ್ಯಾಸ್ಟಿಕ್ ಅಷ್ಟೇ ಎಂದು ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ.
ಬೇರೆಯವರಿಗೂ ಮನೆಯವರಿಗೂ ಹೇಳುವುದಿಲ್ಲ. ಆದ್ರೆ ಇದನ್ನ ನಿರ್ಲಕ್ಷ್ಯ ಮಾಡುವಂತಿಲ್ಲ.
ವಿಪರೀತ ಬೆವರುವುದು , ಸುಸ್ತಾಗುವುದು, ಯಾವುದಾದರು ರಟ್ಟೆ ವಿಪರೀತ ನೋಯುವುದು, ಎದೆ ಕಿವುಚಿದಂತೆ ಆಗುವುದು, ನಿರ್ಲಕ್ಷಿಸಬಾರದು. ಇಂಥ ಲಕ್ಷಣಗಳು ಹೆಚ್ಚಾಗಿ ನಡೆಯುವಾಗಲೂ, ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣ ಆಸ್ಪತ್ರೆ ಸೇರಬೇಕು.
ಮುನ್ನೆಚ್ಚರಿಕಾ ಕ್ರಮಗಳು
ಹೃದಯಾಘಾತವಾದ ಮೊದಲ ಅರ್ಧ ಗಂಟೆಯ ಸಮಯ ವ್ಯರ್ಥ ಮಾಡಬಾರದು.
40 ವರ್ಷದ ನಂತರ ಪ್ರತಿಯೊಬ್ಬರು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು..
ವಯಸ್ಸಾದವರು, ಈಗಾಗಲೇ ನಿತ್ಯ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲು ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್, ಎಟಿಎಂ ಕಾರ್ಡ್, ಐಡಿ ಕಾರ್ಡ್ ಮತ್ತು ನೀರಿನ ಬಾಟಲಿ ಜೊತೆಯಲ್ಲಿ ತೆಗೆದುಕೊಂಡು ಹೋಗವುದು ಒಳ್ಲೆಯದು.
ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಖಾಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ ಹೃದಯಾಘಾತ ಆಗುವುದಿಲ್ಲ ಎಂಬುದು ತಪ್ಪು ತಿಳುವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಕಾರಣಗಳು ಇರುತ್ತವೆ.
ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು(ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ, ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಕ್) ಹೆಚ್ಚಾಗುತ್ತಿರುತ್ತದೆ, ಆದರೆ ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.
ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ, ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್ಗಳು ಒಂದಕ್ಕಿಂತ ಹೆಚ್ಚು ಕೂಡ ಮೇಲ್ಪಟ್ಟು ಕೂಡ ಪತ್ತೆಯಾಗಿರುವುದು. ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ ಆರೋಗ್ಯವಾಗಿರಬಹುದು. ಏನು ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.