Kolar ಕೋಲಾರದಲ್ಲಿ ಭಾರಿ ಮಳೆ : ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡ ಕಾರು
ಕೋಲಾರ : ಜಿಲ್ಲೆಯಲ್ಲಿ ಕಳೆದ ಕೆಲದಿನಗಳಿಂದ ಮಳೆರಾಯ ಆರ್ಭಟಿಸುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಕೋಲಾರದ ನಗರದ ರೈಲ್ವೆ ಅಂಡರ್ ಪಾಸ್ ನಲ್ಲಿ ಭಾರಿ ಮಳೆಯಿಂದಾಗಿ ನೀರು ತುಂಬಿಕೊಂಡಿದ್ದು, ಇನ್ನೋವಾ ಕಾರು ಸಿಲುಕಿಕೊಂಡಿದೆ.
ಕೋಲಾರ ನಗರದ ಕೀಲಕೋಟೆ ಬಡಾವಣೆ ಬಳಿ ಘಟನೆ ನಡೆದಿದೆ.
ಅವೈಜ್ಞಾನಿಕವಾಗಿ ರೈಲ್ವೇ ಅಂಡರ್ ಪಾಸ್ ಅನ್ನು ನಿರ್ಮಿಸಿರೋದೇ ಮಳೆ ನೀರು ತುಂಬಿಕೊಳ್ಳಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಸದ್ಯ ಕಾರ್ ನಲ್ಲಿದ್ದ ನಾಲ್ವರು ಸುರಕ್ಷಿತವಾಗಿ ದಡಕ್ಕೆ ಸೇರಿಸಲಾಗಿದೆ.
ನಿನ್ನೆ ಸಂಜೆಯಿಂದ ನಗರದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಜಲ್ಲೆಯಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ.