ನೀರಿನ ರಭಸಕ್ಕೆ ಕೊಚ್ಚಿ ಹೋದ 14 ಕುರಿಗಳು Heavy rain saaksha tv
ಚಿತ್ರದುರ್ಗ : ಭಾರಿ ಮಳೆಗೆ ರಭಸವಾಗಿ ಹರಿಯುತ್ತ ನೀರಿನಲ್ಲಿ 14 ಕುರಿಗಳು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡ ತೇಕಲವಟ್ಟಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆರಾಯನ ಅಬ್ಬರ ಜೋರಾಗಿದ್ದು, ದೊಡ್ಡ ತೇಕಲವಟ್ಟಿಯ ಹಳ್ಳ ಭರ್ತಿಯಾಗಿ ರಭಸವಾಗಿ ಹರಿಯುತ್ತಿದೆ.
ನಿನ್ನೆ ಕೂಡ ಮಳೆಯಾಗಿದ್ದು, ಹಳ್ಳ ದಾಡುವ ವೇಳೆ ಈಶ್ವರಪ್ಪ ಎಂಬವರಿಗೆ ಸೇರಿದ 4 ಕುರಿಗಳು, ರೇವಣ್ಣನ 4 ಕುರಿಗಳು ಹಾಗೂ ರಂಗಪ್ಪ ಎಂಬವರಿಗೆ ಸೇರಿದ 2 ಕುರಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ಸದ್ಯ ಕುರಿಗಾಹಿಗಳ ಕೈಗೆ 10 ಕುರಿಗಳು ಸಿಕ್ಕಿದ್ದು, ಅವು ಸಾವನ್ನಪ್ಪಿವೆ. ಇನ್ನುಳಿದ 4 ಕುರಿಗಳು ನೀರಿನಲ್ಲೇ ಕೊಚ್ಚಿ ಹೋಗಿವೆ.