ನವದೆಹಲಿ : ಕಾರ್ಮಿಕರ ದಿನವೇ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ.
ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್ ಪಿಜಿ ಸಿಲಿಂಡರ್ (Commercial Cylinder) ಬೆಲೆ (Price)ಯಲ್ಲಿ ಹೆಚ್ಚಿನ ಇಳಿಕೆ ಕಂಡಿದ್ದು, 171. 50 ರೂ. ಕಡಿತವಾಗಿದೆ. ಇಂದಿನಿಂದ ಈ ಆದೇಶ ಜಾರಿಯಾಗಿದೆ.
ಏಪ್ರಿಲ್ನಲ್ಲಿ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ನ ಬೆಲೆಗಳನ್ನು 92 ರೂ. ಇಳಿಕೆ ಮಾಡಿತ್ತು. ಸದ್ಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು ಪರಿಷ್ಕರಿದ್ದು, ಪುನಃ ಇಳಿಕೆಯಾಗಿದೆ. ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. ರಾಜಧಾನಿ ದೆಹಲಿಯಲ್ಲಿ (New Delhi) 19 ಕೆ.ಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ 1856.50 ರೂ. ಆಗಿದೆ.
ಹಿಂದೆ 2,028 ರೂ. ಇತ್ತು. ಮುಂಬಯಿನಲ್ಲಿ (Mumbai) ಈ ಮೊದಲು 1,980 ರೂ. ಇದ್ದು, ಸದ್ಯ ಇದರ ಬೆಲೆ 1,808.50 ರೂ. ಆಗಿದೆ. ಚೆನ್ನೈನಲ್ಲಿ (Chennai) ವಾಣಿಜ್ಯ ಸಿಲಿಂಡರ್ ನ ಬೆಲೆ ಈ ಮೊದಲು 2,192.50 ರೂ. ಇದ್ದು, ಸದ್ಯ 2,021.50 ರೂ. ಆಗಿದೆ.