Actor Vishal Accident : ಹೀರೋ ವಿಶಾಲ್ ಗೆ ಗಾಯ
ಸಿನಿಮಾಗಳಲ್ಲಿ ಆಕ್ಷನ್ ಸೀನ್ ಗಳಿಗಾಗಿ ರಿಸ್ಕ್ ತೆಗೆದುಕೊಳ್ಳುವ ಹೀರೋಗಳಲ್ಲಿ ವಿಶಾಲ್ ಕೂಡ ಒಬ್ಬರು.
ಸಾಹಸ ಸನ್ನಿವೇಶಗಳಲ್ಲಿ ಡೂಪ್ ಬಳಸದೇ ಸ್ವತಃ ತಾವೇ ಆಕ್ಷನ್ ಗೆ ಇಳಿಯುವ ವಿಶಾನ್ ಸಿನಿಮಾಗಳಲ್ಲಿ ಸಾಹಸಮಯ ದೃಶ್ಯಗಳಿಗೆ ಸಾಕಷ್ಟು ಮಹತ್ವ ನೀಡಲಾಗುತ್ತದೆ.
ಆಕ್ಷನ್ ದೃಶ್ಯಗಳು ನೈಜಸ್ವರೂಪದಲ್ಲಿದ್ದರೇ ಸಿನಿಮಾಗೆ ಪ್ಲಸ್ ಪಾಯಿಂಟ್ ಅನ್ನೋದು ವಿಶಾಲ್ ನಂಬಿಕೆ.
ಹೀಗಾಗಿ ಆಕ್ಷನ್ ಸೀನ್ ಗಳಲ್ಲಿ ಅವರೇ ಭಾಗಿಯಾಗುತ್ತಾರೆ.
ಇಂತಹ ಸಂದರ್ಭದಲ್ಲಿ ಅವರು ಸಾಕಷ್ಟು ಭಾರಿ ಗಾಯಗೊಂಡಿರುವ ಸಂದರ್ಭಗಳು ಕೂಡ ಇವೆ.
ಆದ್ರೂ ಯಾವುದೇ ಕಾಂಪ್ರಮೈಜ್ ಆಗದೇ ವಿಶಾಲ್ ಶೂಟಿಂಗ್ ನಲ್ಲಿ ಭಾಗವಹಿಸುತ್ತಾರೆ.

ಆದ್ರೆ ಇದೀಗ ಸಿನಿಮಾ ಶೂಟಿಂಗ್ ವೇಳೆ ವಿಶಾಲ್ ತೀವ್ರವಾಗಿ ಗಾಯಗೊಂಡಿದ್ದಾರೆ.
ವಿಶಾಲ್ ನಟಿಸುತ್ತಿರುವ ಲಾಠಿ ಸಿನಮಾದ ಕ್ಲೈಮ್ಯಾಕ್ಸ್ ನಲ್ಲಿ ಪ್ರಮಾದ ನಡೆದಿದೆ.
ಈ ವೇಳೆ ವಿಶಾಲ್ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
ಇದರಿಂದ ಸಿನಿಮಾ ಶೂಟಿಂಗ್ ನಿಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಹೈದರಾಬಾದ್ ಶೂಟಿಂಗ್ ವೇಳೆ ವಿಶಾಲ್ ಕೈಗಳಿಗೆ ಗಾಯಗಳಾಗಿತ್ತು.
ಆಗ ಅವರು ಕೇರಳಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು.
ಇದೀಗ ಮತ್ತೇ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದ ವಿಶಾಲ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.