ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ | ತನಿಖೆ ಚುರುಕುಗೊಳಿಸಿದ ಪೋಲಿಸರು
ಬೆಂಗಳೂರು: ಹೈಕೋರ್ಟ್ ನ್ಯಾಯಾದೀಶರಿಗೆ ಬೆದರಿಕೆ ನೀಡಿದ್ದ ವಿಚಾರವಾಗಿ ಬಂಧಿತನಾಗಿರುವ ರಹಮತ್ ಉಲ್ಲಾ ಅನಾಮಧೇಯ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿದ್ದಾರೆ.
ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನೆ ಸಂಬಂಧ ಬಂಧಿತನಾಗಿರುವ ರಹಮತ್ ಉಲ್ಲಾಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ವಾಟ್ಸಪ್ ಕಾಲ್ ಮಾಡಿ ಮಾತನಾಡಿದ್ದಾನೆ. ಮಾತನಾಡಿದ್ದರೆ ಯಾರ ಜೊತೆ ಮಾತನಾಡಿದ್ದಾನೆ ಎಂಬ ವಿಚಾರದ ಬಗ್ಗೆ ಪೊಲೀಸರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ.
ಅಲ್ಲದೇ ಪೊಲೀಸರಿಂದ ಸಿಡಿಆರ್ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಪ್ರಕರಣದ ಆರೋಪಿ ವಿಚಾರಣೆಯನ್ನು ಇಂಟಲಿಜೆನ್ಸ್ ತಂಡ ಕೂಡ ತನಿಖೆ ಮಾಡುತ್ತಿದೆ. ಆರೋಪಿಯ ಎಲ್ಲಾ ಪೂರ್ವಪರವನ್ನು ತಿಳಿದುಕೊಳ್ಳುವ ಕೆಲಸವನ್ನು ಪ್ರಾಥಮಿಕವಾಗಿ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.