ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಂಪು ಕೋಟೆಯಲ್ಲಿ ಇಂದು (ಮಂಗಳವಾರ) ಧ್ವಜಾರೋಹಣ ನೆರವೇರಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ನಮ್ಮ ನಿರ್ಧಾರ ಮುಂದಿನ ಒಂದು ಸಾವಿರ ವರ್ಷ ಭಾರತ ದಿಕ್ಕನ್ನು ತೋರಿಸಲಿದೆ. ಈ ಅವಧಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಒಂದು ಸಾವಿರ ವರ್ಷದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಸಮಯವಾಗಿದೆ ಎಂದು ಬಣ್ಣಿಸಿದ್ದಾರೆ.
ಗುಲಾಮಿ ಮನಸ್ಥಿತಿಯಿಂದ ಹೊರ ಬರುವ ನಿರ್ಧಾರ ತೆಗೆದುಕೊಳ್ಳುವ ಸಮಯವಾಗಿದೆ. ಭಾರತ ಹೊಸ ಸಾಮರ್ಥ್ಯದೊಂದಿಗೆ ಎಲ್ಲರನ್ನು ಸೆಳೆಯಲಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಲಿದಾನ ನೀಡಿದ ಎಲ್ಲ ಹೋರಾಟಗಾರಿಗೆ ಗೌರವ ಸಲ್ಲಿಸುತ್ತೇನೆ. ಇದು ಅಮೃತ ಕಾಲದ ಮೊದಲ ವರ್ಷ. ಈ ಅವಧಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರ ದೇಶದ ಎಲ್ಲ ಜನರ ಹಿತಾಸಕ್ತಿ ಕಾಪಾಡಲಿದೆ ಎಂದು ಹೇಳಿದ್ದಾರೆ.
ಯುವಕರಿಗೆ ಹೊಸ ಅವಕಾಶ ಸಿಕ್ಕಿದೆ. ನಮ್ಮ ಸರ್ಕಾರದ ನೀತಿಯೂ ಯುವ ಶಕ್ತಿಗೆ ಬಲ ನೀಡಲಿದೆ. T2, T3 ನಗರಗಳಿಂದಲೂ ಪ್ರತಿಭೆಗಳು ಹೊರ ಬರುತ್ತಿವೆ. ಸಣ್ಣ ಊರುಗಳು ಚಿಕ್ಕದಾಗಿರಬಹುದು, ಅವುಗಳ ಶಕ್ತಿ ದೊಡ್ಡದಿದೆ. ಬಡ ಕುಟುಂಬಗಳಿಂದ ಬರುವ ಯುವಕರು ಸಾಧನೆ ಮಾಡುತ್ತಿದ್ದಾರೆ. ಭಾರತದ ರಪ್ತು ಹೆಚ್ಚಾಗುತ್ತಿದೆ. ಕೊರೊನಾ ಕಾಲದಲ್ಲಿ ವಿಶ್ವ ನಮ್ಮ ಶಕ್ತಿಯನ್ನು ನೋಡಿದೆ. ಸಂಕಷ್ಟದ ಸಮಯದಲ್ಲೂ ಮಾನವೀಯತೆ ಮೆರೆದಿದ್ದೇವೆ. ದೇಶದ ಜನರು ಅಂತಹ ಸ್ಥಿರ ಸರ್ಕಾರ ನೀಡಿದ್ದಾರೆ. ನಮ್ಮ ಸರ್ಕಾರ ದೇಶದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಎದು ಹೇಳಿದ್ದಾರೆ.








