Hollywood Critics Awards : ಪ್ರತಿಷ್ಠಿತ ನಾಲ್ಕು ಪ್ರಶಸ್ತಿ ಬಾಚಿಕೊಂಡ RRR…
SS ರಾಜಮೌಳಿ ನಿರ್ದೇಶನದ ಜೂನಿಯರ್ NTR ಮತ್ತು ರಾಮ್ ಚರಣ್ ಮುಖ್ಯ ಭೂಮಿಯಲ್ಲಿ ನಟಿಸಿರುವ RRR ಚಿತ್ರ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳ ಅಶ್ವಮೇಧವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದೆ. LA ಕ್ರಿಟಿಕ್ಸ್ ಅವಾರ್ಡ್ಸ್ ಮತ್ತು ನ್ಯೂಯಾರ್ಕ್ ಕ್ರಿಟಿಕ್ಸ್ ಅವಾರ್ಡ್ಸ್‌ನಲ್ಲಿ ಹಲವು ಪ್ರಶಸ್ತಿಗಳನ್ನ ಗೆದ್ದ ನಂತರ ಇದೀಗ ಪ್ರತಿಷ್ಟಿತ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್‌ನಲ್ಲಿ 4 ಪ್ರಶಸ್ತಿಗಳನ್ನ ದೋಚಿಕೊಂಡಿದೆ.
ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ ಸಮಾರಂಭದಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಿತ್ರ, ಅತ್ಯುತ್ತಮ ಹಾಡು, ಅತ್ಯುತ್ತಮ ಸಾಹಸ ಮತ್ತು ಅತ್ಯುತ್ತಮ ಸಾಹಸ ಚಲನಚಿತ್ರ ಅವಾರ್ಡ್ ಗಳು RRR ಚಿತ್ರದ ಪಾಲಾಗಿವೆ. ಈಗಾಗಲೇ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ನೀಡಲಾಗಿದೆ.
ಇದೀಗ ಮಾರ್ಚ್ 13 ರಂದು ನಡೆಯಲಿರುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 95 ನೇ ಆವೃತ್ತಿಯಲ್ಲಿ ನಾಟು ನಾಟು ಅತ್ಯುತ್ತಮ ಮೂಲ ಗೀತೆಯಲ್ಲಿ ಸ್ಪರ್ದಿಸುತ್ತಿದೆ.
2023 ರ ಆಸ್ಕರ್‌ಗೆ ಮುಂಚಿತವಾಗಿ, S. S. ರಾಜಮೌಳಿ ಅವರ RRR ಚಿತ್ರ USA ನಲ್ಲಿ ರಾಷ್ಟ್ರವ್ಯಾಪಿ ಮರುಬಿಡುಗಡೆಯಾಗುತ್ತಿದೆ. ವಿತರಕ ವೇರಿಯನ್ಸ್ ಫಿಲ್ಮ್ಸ್ ಅವರು ಮಾರ್ಚ್ 3 ರಿಂದ ದೇಶದ 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ RRR ಪ್ರದರ್ಶಿಸುವುದಾಗಿ ದೃಢಪಡಿಸಿದ್ದಾರೆ.
Hollywood Critics Awards : Hollywood Critics Association Awards 2023: Behold The Glory Of Team RRR