ಚಂದನವನ, ಕನ್ನಡ ಚಿತ್ರರಂಗ (Sandalwood) ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ಅಶ್ಲೇಷ ಬಲಿ ಪೂಜೆಯಲ್ಲಿ ತಾರೆಯರು ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಭಾಗಿಯಾಗಿದ್ದ ನಟ ಪ್ರೇಮ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನಮ್ಮ ಊಟಕ್ಕೆ ಕುತ್ತು ಬಂದಾಗ ನಾವು ಭಗವಂತನ ಮೊರೆ ಹೋಗುಬೇಕು ಎಂದು ಹೇಳಿದ್ದಾರೆ.
ಏನೇ ಕಷ್ಟ ಬಂದರೂ ಫಸ್ಟ್ ನಾವು ದೇವರ ಬಳಿ ಹೋಗುತ್ತೇವೆ. ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಇದನ್ನು ಮಾಡಲಾಗುತ್ತಿದೆ. ಕನ್ನಡ ಸಿನಿಮಾಗಳು ಸೋಲುತ್ತಿವೆ. ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ನಮ್ಮ ಊಟಕ್ಕೆ ಕುತ್ತು ಬಂದಾಗ ನಾವು ಭಗವಂತನ ಮೊರೆ ಹೋಗಬೇಕು. ಹೀಗಾಗಿಯೇ ಈ ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಕ್ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದು, ಹಿರಿಯ ನಟಿ ಗಿರಿಜಾ ಲೋಕೇಶ್, ಶರಣ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.