Honey Trap – ಪಾಕ್ ಮಹಿಳಾ ಏಜೆಂಟ್ ಗೆ ಮಾಹಿತಿ ಸೋರಿಕೆ ಮಾಡಿದ ಯೋಧ…
ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳನ್ನ ಅಕ್ರಮವಾಗಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎಂಬ ಕಾರಣಕ್ಕೆ ಯೋಧ ಪ್ರದೀಪ್ ಕುಮಾರ್ ಅವರನ್ನು ರಾಜಸ್ಥಾನ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಹಿಳಾ ಏಜೆಂಟ್ ಎಸೆದ ಹನಿಟ್ರ್ಯಾಪ್ ಬಲೆಗೆ ಪ್ರದೀಪ್ ಸಿಕ್ಕಿಬಿದ್ದಿದ್ದಾನೆ.
ರಾಜಸ್ಥಾನ ಪೊಲೀಸ್ ಗುಪ್ತಚರ ಮಹಾನಿರ್ದೇಶಕ ಉಮೇಶ್ ಮಿಶ್ರಾ ಪ್ರಕಾರ, 24 ವರ್ಷದ ಪ್ರದೀಪ್ ಕುಮಾರ್ ಜೋಧ್ಪುರದಲ್ಲಿ ನೆಲೆಸಿದ್ದಾನೆ. ಈತನಿಗೆ ಫೇಸ್ ಬುಕ್ ಮೂಲಕ ಪಾಕಿಸ್ತಾನಿ ಮಹಿಳೆಯ ಪರಿಚಯವಾಗಿತ್ತು. ಆಕೆ ಪಾಕಿಸ್ತಾನದ ಐಎಸ್ಐ ಏಜೆಂಟ್. ತನ್ನನ್ನು ತಾನು ಹಿಂದೂ ಎಂದು ಪರಿಚಯಿಸಿಕೊಂಡಿದ್ದಳು, ನಾನು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ವಾಸಿಸುತ್ತಿದ್ದೇನೆ ನನ್ನ ಹೆಸರು ಚಡಮ್ . ತಾನು ಬೆಂಗಳೂರಿನ ಕಾರ್ಪೊರೇಟ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ಕೆಲವು ತಿಂಗಳ ನಂತರ ಪ್ರದೀಪ್ ಮದುವೆಯ ಹೆಸರಿನಲ್ಲಿ ದೆಹಲಿಗೆ ತೆರಳಿದರು. ಈ ವೇಳೆ ಮಹಿಳೆಗೆ ಕಳುಹಿಸಿರುವ ಸೇನೆಗೆ ಸಂಬಂಧಿಸಿದ ಚಿತ್ರಗಳು ಸೋರಿಕೆಯಾಗಿವೆ.
ಆರು ತಿಂಗಳ ಹಿಂದೆ ಇವರಿಬ್ಬರು ವಾಟ್ಸಾಪ್ ಮೂಲಕ ಸಂಪರ್ಕದಲ್ಲಿದ್ದರು. ಸೇನೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಪ್ರದೀಪ್ ಮಹಿಳೆಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದ. ಪಿತೂರಿಯಲ್ಲಿ ಇತರ ಸೈನಿಕರೂ ಭಾಗಿಯಾಗುವಂತೆ ಪ್ರಯತ್ನಿಸಲಾಗಿದೆ. ಪ್ರಕರಣದಲ್ಲಿ ಪ್ರದೀಪ್ ಸ್ನೇಹಿತನನ್ನೂ ಆರೋಪಿ ಎಂದು ಹೆಸರಿಸಲಾಗಿದೆ. ಮೇ 18ರಂದು ಪ್ರದೀಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೇ 21ರಂದು ಬಂಧಿಸಲಾಗಿತ್ತು.