-Honour killing of lovers in Bagalkote-ಬಾಗಲಕೋಟೆ: ಕೆಳ ಜಾತಿಯ ಹುಡುಗನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಮಗಳು ಮತ್ತು ಅವಳ ಪ್ರಿಯಕರನನ್ನು ತಂದೆ ಹತ್ಯೆ ಮಾಡಿರುವ ಧಾರುಣಘಟನೆ ಬಾಗಲಕೋಟೆ ತಾಲ್ಲೂಕಿನ ಬೇವಿನಮಟ್ಟಿಗ್ರಾಮದಲ್ಲಿ ನಡೆದಿದೆ.
ಬೇವಿನಮಟ್ಟಿ ಗ್ರಾಮದ 18ವರ್ಷದ ರಾಜೇಶ್ವರಿ ಕರಡಿ 24 ವರ್ಷದ ವಿಶ್ವನಾಥ್ ನೆಲಗಿ ಎಂಬುವವರು ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿಯ ಮನೆಯವರಿಗೆ ಗೊತ್ತಾಗಿ ಯುವಕ ಕೆಳ ಜಾತಿಯವನು ಎಂದು ತಿಳಿದು ಹುಡುಗಿಗೆ ಅವನೊಂದಿಗಿನ ಒಡನಾಟ ಬಿಡುವಂತೆ ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದರು. ಜಾತಿ ವಿಷಯವಾಗಿ ಈ ಹಿಂದೆ ಎರಡು ಕುಟುಂಬದವರ ಮಧ್ಯೆ ಜಗಳವಾಗಿತ್ತು. ಆದರೆ ಈಗ ಇಬ್ಬರದ್ದು ಬಾಗಲಕೋಟೆಯ ಬೇವಿನಮಟ್ಟಿ ಗ್ರಾಮದಲ್ಲಿ ಕೊಲೆಯಾಗಿದೆ ಇಬ್ಬರ ಶವಗಳು ಪತ್ತೆಯಾಗಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೇವಿನಮಟ್ಟಿ, ಹನುಮಂತ ಬೇವಿನಮಟ್ಟಿ ಹಾಗೂ ಬೀರಪ್ಪ ದಳವಿ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತನಿಕೆಯ ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಯುವಕನ ತಾಯಿ ಮಗ ಕಾಣಿಸುತ್ತಿಲ್ಲ ಎಂದು ದೂರು ನೀಡಿದ್ದರು. ಹಾಗೆ ಮಗಳನ್ನು ಅಪಹರಿಸಲಾಗಿದೆ ಎಂದು ಹುಡುಗಿಯ ಪೋಷಕರು ದೂರು ನೀಡಿದ್ದರು. ಪೊಲೀಸ್ ತನಿಖೆ ವೇಳೆ ಅಪ್ರಾಪ್ತೆಯ ಪೋಷಕರ ಮೇಲೆ ಅನುಮಾನ ಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ ಬೆಳಕಿಗೆ ಬಂದಿದೆ.
ವಿಶ್ವನಾಥ್ ಪೋಷಕರು ಜೀವನೋಪಾಯಕ್ಕಾಗಿ ಕೇರಳದ ಕಾಸರಗೋಡಿಗೆ ಕಳುಹಿಸಿದ್ದರು, ಅಲ್ಲಿಆತ ದಿನಗೂಲಿ ಕೆಲಸ ಮಾಡಲು ಪ್ರಾರಂಭಿಸಿದ್ದ. ಅಷ್ಟರಲ್ಲಿ ರಾಜೇಶ್ವರಿ ಜೊತೆಗೆ ಪ್ರೇಮಾಂಕುರವಾಗಿ ರಾಜೇಶ್ವರಿ ತನ್ನ ತಂದೆ-ತಾಯಿಗೆ ವಿಶ್ವನಾಥ್ ನನ್ನು ಮದುವೆಯಾಗುವ ಇಚ್ಛೆಯನ್ನು ತಿಳಿಸಿದ್ದಳು.
ಯುವತಿಯ ಕುಟುಂಬಸ್ಥರು ಇದಕ್ಕೆ ಕೊನೆ ಹಾಡಲೆಂದು ಇಬ್ಬರಿಗಾಗಿ ಉಪಾಯದಿಂದ ಬಲೆ ಬೀಸಿದ್ದಾರೆ . ಮದುವೆ ಮಾಡಿಕೊಡುವುದಾಗಿ ಹೇಳಿ ವಿಶ್ವನಾಥ್ ನನ್ನು ಕರೆಸಿಕೊಂಡಿದ್ದಾರೆ. ವಿಶ್ವನಾಥ್ ನರಗುಂದ ತಲುಪಿದಾಗ ಯುವತಿಯನ್ನು ಬೇರೆ ವಾಹನದಲ್ಲಿ ಕರೆತರುವಾಗ ಆರೋಪಿಗಳು ಆತನನ್ನು ಜೀಪಿನಲ್ಲಿ ಕೂಡಿ ಹಾಕಿದ್ದರು. ಇಬ್ಬರನ್ನೂ ವಾಹನದಲ್ಲಿಯೇ ಹತ್ಯೆ ಮಾಡಿ, ಇಬ್ಬರ ಶವಗಳನ್ನು ಕೃಷ್ಣಾ ನದಿಗೆ ಎಸೆಯಲಾಗಿದೆ ಎಂದು ಪೊಲೀಸರ ತನಿಕೆಯಲ್ಲಿ ಬೆಳಕಿಗೆ ಬಂದಿದೆ ಆದರೆ ಇಬ್ಬರ ಮೃತದೇಹಗಳ ಪತ್ತೆಗೆ ಶೋಧ ಕಾರ್ಯ ಜಾರಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Honour killing of lovers in Bagalkote