ಆಸ್ಪತ್ರೆಯಲ್ಲಿ ಬೆಂಕಿ : 10 ಕೊರೊನಾ ರೋಗಿಗಳು ಸಾವು
ಸ್ಕೋಪ್ಕೆ : ಕೋವಿಡ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಗಢದಲ್ಲಿ 10 ಮಂದಿ ಕೊರೊನಾ ಸೋಂಕಿತರ ಮೃತಪಟ್ಟು, ಹಲವಾರು ಮಂದಿ ಸೋಂಕಿತರು ಗಾಯಗೊಂಡಿರುವ ಘಟನೆ ಅಮೆರಿಕಾದ ಉತ್ತರ ಮೆಸಿಡೋನಿಯಾದಲ್ಲಿ ನಡೆದಿದೆ.
ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಟೆಟೋವೋ ನಗರದಲ್ಲಿ ಇತ್ತೀಚೆಗೆ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಸ್ಥಾಪಿಸಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಏಕಾಏಕಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಪರಿಣಾಮ 10 ಮಂದಿ ಕೊರೊನಾ ಸೋಂಕಿತರು ಸಜೀವ ದಹನವಾಗಿದ್ದಾರೆ. ಹಲವರಿಗೆ ಗಂಭೀರವಾದ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಆದ್ರೆ ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.