ನಾವೆಲ್ಲರೂ ದಿನನಿತ್ಯ ಬಳಸುವ ನಾಣ್ಯಗಳನ್ನು ತಯಾರಿಸಲು ಸರ್ಕಾರವು ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದಕ್ಕೆ ಸಂಬಂಧಿಸಿದ ಕೆಲವೊಂದು ಪ್ರಕ್ರಿಯೆಗಳು ಮತ್ತು ಒಂದಿಷ್ಟು ವೆಚ್ಚಗಳು ತಗಲುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಾಹಿತಿ ಪ್ರಕಾರ, ಪ್ರತಿ ನಾಣ್ಯ ಅಥವಾ ನೋಟು ತಯಾರಿಸಲು ಸರ್ಕಾರ ಖರ್ಚು ಮಾಡುವ ವೆಚ್ಚ ಅಚ್ಚರಿಯ ಸಂಗತಿಯಾಗಿದೆ.
ನಾಣ್ಯ ತಯಾರಣೆ ವೆಚ್ಚ:
₹1 ನಾಣ್ಯ ತಯಾರಿಸಲು ₹1.11 ವೆಚ್ಚ ತಗಲುತ್ತದೆ.
₹2 ನಾಣ್ಯ ತಯಾರಿಸಲು ₹1.28 ವೆಚ್ಚ,
₹5 ನಾಣ್ಯ ತಯಾರಿಸಲು ₹3.69 ವೆಚ್ಚ,
₹10 ನಾಣ್ಯ ತಯಾರಿಸಲು ₹5.54 ವೆಚ್ಚ ತಗಲುತ್ತದೆ.
ಹೌದು, ₹1 ನಾಣ್ಯವನ್ನು ತಯಾರಿಸಲು ಅದರ ಅಸಲಿ ಮೌಲ್ಯಕ್ಕಿಂತ ಹೆಚ್ಚು ವೆಚ್ಚವಾಗುತ್ತದೆ!
ನೋಟು ಮುದ್ರಣೆ ವೆಚ್ಚ:
ನೋಟುಗಳಾದರೂ ಇದಕ್ಕೆ ಹೊರತಾಗಿಲ್ಲ. ನಿರ್ದಿಷ್ಟ ಮೌಲ್ಯದ ನೋಟುಗಳನ್ನು ಮುದ್ರಿಸಲು ತೆಗೆದುಕೊಳ್ಳುವ ವೆಚ್ಚ ಹೀಗಿದೆ:
₹10 ನೋಟು: 1000 ನೋಟುಗಳಿಗೆ ₹1.01 ಪ್ರತಿ ನೋಟಿಗೆ.
₹20 ನೋಟು: 1000 ನೋಟುಗಳಿಗೆ ₹1.01 ಪ್ರತಿ ನೋಟಿಗೆ.
₹50 ನೋಟು: 1000 ನೋಟುಗಳಿಗೆ ₹1.01 ಪ್ರತಿ ನೋಟಿಗೆ.
₹100 ನೋಟು: 1000 ನೋಟುಗಳಿಗೆ ₹1.51 ಪ್ರತಿ ನೋಟಿಗೆ.
₹500 ನೋಟು: 1000 ನೋಟುಗಳಿಗೆ ₹2.57 ಪ್ರತಿ ನೋಟಿಗೆ.
ಏಕೆ ಹೆಚ್ಚಿನ ವೆಚ್ಚ?
ನಾಣ್ಯಗಳನ್ನು ತಯಾರಿಸಲು ಲೋಹದ ಬೆಲೆ, ನೋಟುಗಳಿಗೆ ವಿಶೇಷ ಸುರಕ್ಷತಾ ತಂತ್ರಜ್ಞಾನ, ಮುದ್ರಣ ಯಂತ್ರಗಳು, ಮತ್ತು ಇತರ ವೆಚ್ಚಗಳು ಸೇರಿ ಸರ್ಕಾರ ಹೆಚ್ಚು ಖರ್ಚು ಮಾಡುತ್ತದೆ. ಪ್ರತಿ ನಾಣ್ಯ ಅಥವಾ ನೋಟು ನಕಲಿ ಮಾಡಲಾಗದಂತೆ ತಯಾರಿಸಲು ಸುರಕ್ಷತಾ ವೈಶಿಷ್ಟ್ಯಗಳನ್ನು ಸೇರಿಸುವುದು ಕೂಡಾ ಮುಖ್ಯ ಕಾರಣವಾಗಿದೆ.
ನಾವು ಉಪಯೋಗಿಸುವ ₹1 ಅಥವಾ ₹2 ನಾಣ್ಯ ಅಥವಾ ₹500 ನೋಟುಗಳು ಮೊತ್ತಕ್ಕಿಂತ, ಅದರ ಹಿಂದೆ ಇರುವ ತಯಾರಣಾ ಪ್ರಕ್ರಿಯೆ ಹೆಚ್ಚು ಬೆಲೆ ಬಾಳುತದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತದೆ!