ನಟ ದರ್ಶನ್ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಸದ್ಯ ಅವರನ್ನು ಜೈಲಿನಲ್ಲಿ ಕಂಡು ಮಾತನಾಡಿಸಿದ ಕೈದಿಯೊಬ್ಬರು ಅವರ ಬಗ್ಗೆ ಮಾತನಾಡಿದ್ದಾರೆ.
ಕೊಲೆ ಕೇಸ್ನಲ್ಲಿ 11 ವರ್ಷ ಜೈಲು ವಾಸ ಅನುಭವಿಸಿ ಬಂದಿರುವ ತುರುವನೂರು ಸಿದ್ದಾರೂಢ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ‘ಕರಿಯ’ ಸಿನಿಮಾದ ಶೂಟಿಂಗ್ ನೋಡಿದ್ದ ಅವರು ಆ ಬಳಿಕ ಜೈಲಿಗೆ ಹೋಗಿದ್ದರು. ಜೈಲು ಶಿಕ್ಷೆ ಮುಗಿಸಿ ಹೊರಗೆ ಬರುವುದಕ್ಕೂ ಮುನ್ನ ಜೈಲಿನಲ್ಲಿ ದರ್ಶನ್ ಅವರನ್ನು ನೋಡಿದ್ದೆ. ನನಗೆ ತುಂಬಾ ನೋವಾಯಿತು. ನನ್ನನ್ನು ಅಭಿಮಾನಿ ಎಂದು ಹೇಳಿ ಪೊಲೀಸರು ಭೇಟಿ ಮಾಡಿಸಿದರು.
ನನ್ನ ದರ್ಶನ್ ತಬ್ಬಿಕೊಂಡರು, ಇಬ್ಬರು ಸೇರಿ 10 ನಿಮಿಷ ಧ್ಯಾನ ಮಾಡಿದೇವು. ನಾನು ಕಂಟಿನ್ಯೂ ಮಾಡ್ತೇನಿ ಅಂದ್ರು. ಪುಸ್ತಕಗಳನ್ನು ಓದುತ್ತಿದ್ದಾರೆ. ಅವರು ವಿಐಪಿ ಸೆಲ್ ನಲ್ಲಿದ್ದಾರೆ. ಆದರೆ, ಕೈದಿಯಂತೆ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಅವರಿಗೆ ಯಾವುದೇ ವಿಶೇಷ ಸೌಕರ್ಯಗಳು ಇಲ್ಲ. ನೀರಿನ ಬಾಟಲ್ ಇದೆ. ನೆಲದ ಮೇಲೆ ಮಲಗುತ್ತಾರೆ ಎಂದು ಹೇಳಿದ್ದಾರೆ.








