ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಸಕ ಹೆಚ್.ಡಿ.ರೇವಣ್ಣ (HD Revanna) ಅವರು ಹೊಟ್ಟೆ ನೋವಿನಿಂದ ಬಳಲಿದ್ದು, ಅಧಿಕಾರಿಗಳಿಗೆ ಹೇಳಿದ್ದಾರೆ.
ಜೈಲಾಧಿಕಾರಿಗಳ ಬಳಿ ಹೊಟ್ಟೆ ನೋವೆಂದು ಅಳಲು ತೋಡಿಕೊಂಡಿದ್ದಾರೆ. ಬೆಳಗ್ಗೆ ಪುಳಿಯೋಗರೆ ನೀಡಿದ್ದರೂ ಕೂಡ ಎಚ್.ಡಿ. ರೇವಣ್ಣ ತಿಂದಿಲ್ಲ ಎನ್ನಲಾಗಿದೆ. ಮೂರ್ನಾಲ್ಕು ಬಾರಿ ಬಾರಿ ಹೊಟ್ಟೆ ನೋವೆಂದು ತಿಳಿಸಿದರು ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ. ಎಸ್ ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲವೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಲು ಜೆಡಿಎಸ್ ಮುಂದಾಗಿದೆ.
ರೇವಣ್ಣ ಬೇಲ್ ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್ ಮಧ್ಯಾಹ್ನಕ್ಕೆ ವಿಜಾರಣೆ ಮುಂದೂಡಿದೆ. ಮತ್ತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧ್ಯಾಹ್ನ 2.45ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಸಲಿದೆ. ಎಸ್ಐಟಿ ಪರ ವಾದ ಮಂಡನೆಗೆ ಸರ್ಕಾರ ಇಬ್ಬರು ಹೆಚ್ಚುವರಿ ವಿಶೇಷ ಅಭಿಯೋಜಕರನ್ನು ನೇಮಿಸಿದೆ. ಮಹಿಳೆ ಪತ್ತೆಯಾಗಿರುವ ಅಂಶ ಪ್ರಧಾನವಾಗಿ ಉಲ್ಲೇಖ ಮಾಡಿರುವ ಸಾಧ್ಯತೆ ಇದೆ. ಅನಾರೋಗ್ಯದ ಅಂಶಗಳನ್ನು ಪ್ರಸ್ತಾಪಿಸಿರುವ ಸಾಧ್ಯತೆ ಇದೆ. ಈಗಾಗಲೇ ಬಂಧನ ರಾಜಕೀಯ ಪ್ರೇರಿತ ಎಂದು ರೇವಣ್ಣ ಆರೋಪಿಸಿದ್ದಾರೆ.
ತನಿಖೆ ಆಧರಿಸಿ ಎಸ್ಐಟಿ ಆಕ್ಷೇಪಣೆ ಸಲ್ಲಿಸಿದೆ. ಹೊಸದಾಗಿ ಎಸ್ಪಿಪಿಗಳಾಗಿ ನೇಮಕಗೊಂಡಿದ್ದೇವೆ. ಸೋಮವಾರದವರೆಗೆ ಕಾಲಾವಕಾಶ ಕೋರಿ ಅಶೋಕ್ ಎನ್. ನಾಯಕ್, ಜಾಯನಾ ಕೊಥಾರಿ ಮನವಿ ಮಾಡಿದ್ದಾರೆ.