BJP | ದಾಳಿ‌ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎನ್ನಲು ನೀವು ಯಾರು..?

1 min read
Congress padayatre bjp vs congress tweet war saaksha tv

BJP | ದಾಳಿ‌ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎನ್ನಲು ನೀವು ಯಾರು..?

ಬೆಂಗಳೂರು : ಹುಬ್ಬಳ್ಳಿ ಘಟನೆ ವಿಚಾರವಾಗಿ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿ ಪ್ರಶ್ನೆಗಳ ಸುರಿಮಳೆ ಗೈದಿದೆ. ಅಲ್ಲದೇ  ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ.

ಸಿದ್ದರಾಮಯ್ಯ.. ರಾಜಕೀಯದ ಒತ್ತಡಕ್ಕೆ ಮಣಿದು ಪೊಲೀಸರು ಅಮಾಯಕರನ್ನು ಬಂಧಿಸುವ ಮತ್ತು ತನಿಖೆಯನ್ನೇ ನಡೆಸದೆ ಅಪರಾಧಿಗಳ ಹೆಸರನ್ನು ಮಾಧ್ಯಮಕ್ಕೆ ತಿಳಿಸುವ ಕೆಲಸವನ್ನು ಮಾಡಬಾರದು. ಇದರಿಂದ ಪರಿಸ್ಥಿತಿ ಉಲ್ಭಣಗೊಂಡರೆ ಅದರ ನಿಯಂತ್ರಣದ ಭಾರ ತಮ್ಮ ಮೇಲೆಯೇ ಬೀಳಲಿದೆ ಎಂಬ ಎಚ್ಚರ ಪೊಲೀಸರಿಗೂ ಇರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಇದಕ್ಕೆ ಟಾಂಗ್ ನೀಡಿರುವ ರಾಜ್ಯ ಬಿಜೆಪಿ ಘಟಕ, ಒಂದು ಕಡೆ, ಪೊಲೀಸ್ ಅಧಿಕಾರಿಗಳಿಗೆ ಶಾಂತಿ ಸ್ಥಾಪಿಸಲು ಮನವಿ ಮಾಡುವುದು. ಇನ್ನೊಂದು ಕಡೆ, ಲೋಡುಗಟ್ಟಲೆ ಕಲ್ಲು ಸಂಗ್ರಹಿಸಿ ಕಲ್ಲು ತೂರಾಟ ಮಾಡಿದವರನ್ನು ಅಮಾಯಕರು ಎನ್ನುವುದು, ಇದು ಕಾಂಗ್ರೆಸ್ ನಾಯಕರ ವರಸೆ. ಆರಕ್ಷಕರ‌ ಮೇಲೆಯೇ ದಾಳಿ‌ ಮಾಡಿದ ಅಲ್ಪಮತೀಯರನ್ನು ಅಮಾಯಕರು ಎಂದು ಹೇಳಲು ನೀವು ಯಾರು ಎಂದು ಪ್ರಶ್ನಿಸಿದೆ.

hubballi Congress bjp tweet war saaksha tv

ಇದಲ್ಲದೇ ಹುಬ್ಬಳ್ಳಿ ಘಟನೆ ವಿಚಾರವಾಗಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಬಿಜೆಪಿ, ಹುಬ್ಬಳ್ಳಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಭಾಗಿಯಾಗಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಶಿಕ್ಷಕಿಯೋರ್ವರು ರಕ್ತಪಾತದ ಬೆದರಿಕೆ ಹಾಕಿದ್ದರು. ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಗೂ ಹುಬ್ಬಳ್ಳಿ ಗಲಭೆಗೂ ಸಾಮ್ಯತೆ ಇದೆ. ಪ್ರತಿಭಟನೆಯಲ್ಲಿ ಹೇಳಿದ್ದನ್ನೇ ಮಾಡಿದ್ದಾರೆ. ವ್ಯವಸ್ಥಿತ ಪಿತೂರಿಯಿದು ಎಂದು ದೂರಿದೆ.

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಲೀಮ್ ಅಹಮದ್ ಅವರಿಗೆ ಟಿಕೆಟ್ ನೀಡಿದಾಗ ಹುಬ್ಬಳ್ಳಿ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್‌‌ ಅವರಿಗೆ ಅಸಮಾಧಾನವಾಗಿತ್ತು. ಹುಬ್ಬಳ್ಳಿ ಗಲಭೆ ಈ ಅಸಮಾಧಾನದ ಮುಂದುವರೆದ ಭಾಗವೇ!? ಹುಬ್ಬಳ್ಳಿ ಗಲಭೆ ಕಾಂಗ್ರೆಸ್ ಪ್ರಾಯೋಜಕತ್ವದಲ್ಲೇ ನಡೆದಿದ್ದೇ?

ಈ ಹಿಂದೆ #ಮೀರ್‌ಸಾದಿಕ್ ಸಿಎಂ ಆಗಿದ್ದ ಅವಧಿಯಲ್ಲಿ ತರಬೇತಿ ಕೊಟ್ಟು ಹೊರಬಿಟ್ಟ ಪಿಎಫ್‌ಐ ಅಲ್ಪಮತೀಯವಾದಿಗಳೇ ಹುಬ್ಬಳ್ಳಿ ಗಲಭೆಗೆ ನೇರ ಕಾರಣ.ಪೊಲೀಸ್ ಬಂಧನದಲ್ಲಿದ್ದವರನ್ನು ನನ್ನ ಕೈಗೊಪ್ಪಿಸಿ ಎಂದು ಅಬ್ಬರಿಸುವ ಇವರಿಗೆ ಕಾನೂನು‌ ಕೈಗೆತ್ತಿಕೊಳ್ಳುವುದು ಹುಟ್ಟು ಚಾಳಿಯೇ ಎಂದು ಬಿಜೆಪಿ ಕುಟುಕಿದೆ. hubballi Congress bjp tweet war

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd