Hubli | ನೀರಸಾಗರ ಜಲಾಶಯದಲ್ಲಿ ಯುವಕನ ಶವ ಪತ್ತೆ
ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದಲ್ಲಿ ಯುವಕನ ಶವಪತ್ತೆಯಾಗಿದೆ.
ಮೃತನನ್ನು 22 ವರ್ಷದ ಕಿರಣ ರಜಪೂತ ಎಂದು ಗುರುತಿಸಲಾಗಿದೆ.
ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ನಿವಾಸಿಯಾಗಿರುವ ಕಿರಣ ರಜಪೂತ ನಿನ್ನೆ ಕೆರೆ ಕೋಡಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿಗೆ ಬಿದ್ದಿದ್ದ.
ಕೂಡಲೇ ಆತನನ್ನು ಸ್ನೇಹಿತರು ಹಾಗೂ ಸ್ಥಳೀಯರು ರಕ್ಷಿಸಲು ಮುಂದಾಗಿದ್ದರು.

ಆದ್ರೆ ನೀರಿನ ರಭಸ ಹೆಚ್ಚಿದ್ದ ಕಾರಣ ಕಿರಣ ರಜಪೂತ ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಕೂಡಲೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ, ಪೊಲೀಸರು ಕಿರಣಗಾಗಿ ಹುಡುಕಾಟ ನಡೆಸಿದ್ದರು.
ಆದ್ರೆ ಇಂದು ನೀರಸಾಗರ ಜಲಾಶಯದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
ಇನ್ನು ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.