ಹೈದಾರಾಬಾದ್: ನಾಲ್ಕು ರಾಜ್ಯಗಳ ಫಲಿತಾಂಶ ಹೊರಬೀಳುತ್ತಿದ್ದು, ತೆಲಂಗಾಣದಲ್ಲಿ (Telangana) ಕಾಂಗ್ರೆಸ್ ಭರ್ಜರಿ ಮುನ್ನಡೆ ಸಾಧಿಸುತ್ತಿದೆ.
ಸದ್ಯದ ಮಾಹಿತಿಯಂತೆ ತೆಲಂಗಾಣದಲ್ಲಿ ಬಿಆರ್ಎಸ್ 50, ಕಾಂಗ್ರೆಸ್ 60, ಬಿಜೆಪಿ 3, ಎಐಎಂಐಎಂ 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಈ ರಾಜ್ಯದಲ್ಲಿ ಒಟ್ಟು 119 ಸ್ಥಾನಗಳಿದ್ದು ಬಹುಮತಕ್ಕೆ 60 ಸ್ಥಾನಗಳು ಮ್ಯಾಜಿಕ್ ನಂಬರ್ ಆಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಆರ್ಎಸ್ 88 ಸೀಟ್ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಆಗ ಕಾಂಗ್ರೆಸ್ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಬಿಜೆಪಿ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.