ಬೆಂಗಳೂರು : ದೇಶದಲ್ಲಿ ಪ್ರೆಟ್ರೋಲ್, ಡೀಸೆಲ್ ಮತ್ತು ಕೊರೊನಾ ಸೋಂಕು ಪ್ರಸ್ತುತ ಒಂದೇ ನಾಣ್ಯದ ಎರಡು ಮುಖಗಳಿಂದಂತೆ. ದಿನಗಳು ಕಳೆದಂತೆ ಪ್ರೆಟ್ರೋಲ್ ಡೀಸೆಲ್ ದರ ಹೆಚ್ಚಾಗುತ್ತಿದೆ. ಜೊತೆಗೆ ಕೊರೊನಾ ಸೋಂಕು ಸಹ ನಿಯಂತ್ರಣಕ್ಕೆ ಬರುತ್ತಿಲ್ಲ.
ದೇಶದಲ್ಲಿ ನಿರಂತರವಾಗಿ ಪ್ರೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಿದೆ. ಇದರಿಂದಾಗಿ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿದೆ. ಲಾಕ್ ಡೌನ್ ನಿಂದಾಗಿ ಜನ ಆರ್ಥಿಕವಾಗಿ ತತ್ತರಿಸಿದ್ದರು. ಅನ್ ಲಾಕ್ ಬಳಿಕ ನಿಧಾನಗತಿಯಲ್ಲಿ ಚೇತರಿಕೆ ಕಾಣಸಿಕೊಳ್ಳುತ್ತಿತ್ತು. ಇದೆ ಹೊತ್ತಿನಲ್ಲಿ ಪ್ರೆಟ್ರೋಲ್ ಡೀಸೆಲ್ ದರ ಹೆಚ್ಚಾಗುತ್ತಿದೆ.
ಪೆಟ್ರೋಲ್, ಡೀಸೆಲ್ ದರ ಏರಿಸುತ್ತಿರುವ ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ಕೆಪಿಸಿಸಿ ಸೈಕಲ್ ಚಳುವಳಿ ಹಮ್ಮಿಕೊಂಡಿದೆ. ಈ ಪ್ರತಿಭಟನೆಯ ಅಂಗವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಿಂದ ಪಕ್ಷದ ಕಚೇರಿ ವರೆಗೆ ಸೈಕಲ್ ಮೂಲಕ ತೆರಳಿದರು . ಸಿದ್ದರಾಮಯ್ಯ ಅವರಿಗೆ ಶಾಸಕ ಜಮ್ಮೀರ್ ಅಹ್ಮದ್ ಸೇರಿದಂತೆ ಇತರೆ ಮುಖಂಡರು ಸಾಥ್ ನೀಡಿದ್ದರು.
ಇಂದು ರಾಜ್ಯ ಕಾಂಗ್ರೆಸ್ ಸೈಕಲ್ ಚಳುವಳಿ ರಾಜ್ಯಾದ್ಯಂತ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಎಲ್ಲಾ ಕಾಂಗ್ರೆಸ್ ಹಿರಿಯ ನಾಯಕರು ಮತ್ತು ಕಾರ್ಯಕರ್ತು ಸೈಕಲ್ ಮೂಲಕ ಕಚೇರಿಗೆ ತೆರಳಲಿದ್ದಾರೆ.