ಪುಣೆ: ಪತ್ನಿಯೊಬ್ಬರು ತನ್ನ ಪತಿ ದುಬೈಗೆ ಕರೆದುಕೊಂಡು ಹೋಗಿಲ್ಲ ಎಂದು ಕೊಲೆ ಮಾಡಿರುವ ಘಟನೆ ನಡೆದಿದೆ.
ಹುಟ್ಟು ಹಬ್ಬಕ್ಕೆ ದುಬೈಗೆ ಕರೆದೊಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ ಪತ್ನಿಯು ಪತಿಯ ಮೂಗಿಗೆ ಗುದ್ದಿದ ಪರಿಣಾಮ ಆತ ಸಾವನ್ನಪ್ಪಿದ್ದಾರೆ. ಈ ಘಟನೆ ಮಹಾರಾಷ್ಟ್ರದ (Maharashtra) ಪುಣೆಯ (Pune) ವನವಡಿ ಪ್ರದೇಶದಲ್ಲಿ ನಡೆದಿದೆ. 36 ವರ್ಷದ ನಿಖಿಲ್ ಖನ್ನಾ ಸಾವನ್ನಪ್ಪಿರುವ ದುರ್ದೈವಿ. ವನವಡಿ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ನ ಐಷಾರಾಮಿ ವಸತಿಗೃಹದಲ್ಲಿ ಈ ಘಟನೆ ನಡೆದಿದೆ.
ನಿಖಿಲ್ ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಯಾಗಿದ್ದರು. ಇವರು 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಪತ್ನಿ ರೇಣುಕಾ ಅವರ ಹುಟ್ಟು ಹಬ್ಬವಿತ್ತು. ಆದರೆ, ದುಬಾರಿ ಉಡುಗೊರೆ, ದುಬೈಗೆ ಕರೆದುಕೊಂಡು ಹೋಗದ ಹಿನ್ನೆಲೆಯಲ್ಲಿ ಜಗಳ ಮಾಡಿದ್ದಾರೆ. ಆಗ ನಿಖಿಲ್ನ ಮುಖಕ್ಕೆ ರೇಣುಕಾ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ನಿಖಿಲ್ ಅವರ ಮೂಗು ಮತ್ತು ಕೆಲವು ಹಲ್ಲುಗಳು ಮುರಿದಿವೆ. ಇದರಿಂದಾಗಿ ರಕ್ತ ಸ್ರಾವ ಉಂಟಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ತನಿಖೆಗಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.