Crime: ಪತ್ನಿಯನ್ನು ಕೊಲೆ ಮಾಡಿದ ತಾಳ್ಮೆಗೆಟ್ಟ ಪತಿ

1 min read
Anekal Saaksha Tv

ಪತ್ನಿಯನ್ನು ಕೊಲೆ ಮಾಡಿದ ತಾಳ್ಮೆಗೆಟ್ಟ ಪತಿ

ಆನೇಕಲ್: ಪತ್ನಿಯ ಅಶ್ಲೀಲ ವಿಡಿಯೋವನ್ನು ಮೈದುನ ತೆಗೆದಿದ್ದಾನೆಂದು, ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ.

ಪತ್ನಿ ಸರಸ್ವತಿ (33) ಮೃತ ದುರ್ದೈವಿ. ತಿಮ್ಮರಾಯಸ್ವಾಮಿ ದೇವಾಲಯ ರಸ್ತೆಯ ಮಲ್ಲೇಶ್(35) ಕೊಲೆ ಮಾಡಿದ ಆರೋಪಿ. ಆರೋಪಿ ಕೊಲೆ ಮಾಡಿದ ನಂತರ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ತಡರಾತ್ರಿ ಪತ್ನಿಯ ಅಶ್ಲೀಲ ವಿಡಿಯೋವನ್ನು ಮೈದುನ ತೆಗೆದಿದ್ದಾನೆಂದು ಆರೋಪಿಸಿ ಗಲಾಟೆ ನಡೆದಿದೆ. ಇದನ್ನು ಪತ್ನಿ ಅಲ್ಲಗಳೆದು ಎಷ್ಟೇ ತಿಳಿಹೇಳಿದರೂ ಪತಿ ಕೇಳಿಸಿಕೊಂಡಿಲ್ಲ. ತಾಳ್ಮೆ ಕಳೆದುಕೊಂಡ ಪತಿ ಪತ್ನಿಯ ಕತ್ತಿಗೆ ವೇಲ್​ನಿಂದ ಸುತ್ತಿ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.

ನಂತರ ಬೆಳಗ್ಗೆ ಆನೇಕಲ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd