ಪತ್ನಿಯನ್ನು ಟೊಮೆಟೊ ಎಂದು ಕರೆದಿದ್ದಕ್ಕೆ ವೃದ್ದನನ್ನು ಕೊಂದ ಪತಿ
ಬಿಹಾರ: ಪತ್ನಿಯನ್ನು ಟೊಮೆಟೊ ಅಂತ ನೆರ ಮನೆಯ ವೃದ್ಧ ಚುಡಾಯಿಸಿದ್ದಕ್ಕೆ ವೃದ್ಧನನ್ನು ಪತಿ ಕೊಲೆ ಮಾಡಿರುವ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.
ಮಹೇಶ್ ದಾಸ್ ಕೊಲೆಯಾದ ನೆರೆ ಮನೆಯ ವೃದ್ಧ. ಬ್ರಹ್ಮದೇವ್ ದಾಸ್ ಕೊಲೆ ಆರೋಪಿ. ಮಹೇಶ್ ದಾಸ್ ಬ್ರಹ್ಮದೇವ್ ದಾಸ್ ಪತ್ನಿಯನ್ನು ಟೊಮೆಟೊ ಟೊಮೆಟೊ ಅಂತ ಚುಡಾಯಿಸಿದ್ದಾನೆ. ಇದನ್ನು ಪತ್ನಿ ಪತಿಗೆ ತಿಳಸಿದ್ದಾಳೆ. ಇದರಿಂದ ಕೋಪಗೊಂಡು ಬ್ರಹ್ಮದೇವ್, ಮಹೇಶ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಮುಂಗೇರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಡೆದಿದೇನು? ಕಳೆದ ಮಂಗಳವಾರ ಮಹೇಶ್ ದಾಸ್ ತರಕಾರಿ ಖರೀದಿಸಿ ವಾಪಸ್ ಮನೆಗೆ ಬರುತ್ತಿದ್ದಾಗ ಸ್ನೇಹಿತನೊಂದಿಗೆ ಮಾತನಾಡುತ್ತಾ ನಿಂತಿದ್ದನಂತೆ. ಈ ವೇಳೆ ರಸ್ತೆಯಲ್ಲಿ ಬ್ರಹ್ಮದೇವ್ ದಾಸ್ ಪತ್ನಿ ಹೋಗುತ್ತಿದ್ದರಂತೆ. ಮಹಿಳೆಯನ್ನು ಗಮನಿಸಿದ ಮಹೇಶ್ ದಾಸ್ ಮೇಲಿಂದ ಮೇಲೆ ಟೊಮೆಟೊ ಟೊಮೆಟೊ ಎಂದು ಹೀಯಾಳಿಸಿದ್ದಾನೆ. ಇದರಿಂದ ನೊಂದ ಆಕೆ ತನ್ನ ಪತಿ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದ್ದಾಳೆ. ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ಗಂಡ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ.
ನಂತರ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿ ವೃದ್ದ ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.