ಕ್ಷುಲ್ಲಕ ಕಾರಣಕ್ಕೆ ಗರ್ಬಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿ
ಉತ್ತರ ಪ್ರದೇಶ: ಪತಿ ಗರ್ಭಿಣಿ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಪೂನಂ ಮೃತ ದುರ್ದೈವಿ. ವಿನೋದ್ ಕುಮಾರ್ ಕೊಲೆ ಮಾಡಿದ ಆರೋಪಿ. ಪತ್ನಿಯನ್ನು ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ನಡೆದಿದ್ದೇನು?:ಆರೋಪಿ ವಿನೋದ್ ಕುಮಾರ್ ತನ್ನ ತಾಯಿ ಜೈದೇವಿ, ಪತ್ನಿ ಪೂನಂ ಹಾಗೂ ಇಬ್ಬರು ಮಕ್ಕಳಾದ ಬಬ್ಲು (6) ಹಾಗೂ ಮಗಳು ವಂದನಾ (4) ಅವರೊಂದಿಗೆ ಮೀರತ್ ಪಟ್ಟಣದ ಮೂರನೇ ಬಡಾವಣೆಯಲ್ಲಿ ವಾಸಿಸುತ್ತಿದ್ದರು.ಕೌಟುಂಬಿಕ ಕಲಹದ ವಿಚಾರವಾಗಿ ಇಂದು ಬೆಳಗ್ಗೆ ವಿನೋದ್ ತನ್ನ ಪತ್ನಿ ಪೂನಂ ಜೊತೆ ಜಗಳವಾಡಿದ್ದಾನೆ.
ಇದರ ಬೆನ್ನಲ್ಲೇ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆಕೆಯ ಕತ್ತು ಸೀಳಿದ್ದಾನೆ. ಇದರ ಬೆನ್ನಲ್ಲೇ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಅನೇಕರನ್ನ ವಿಚಾರಣೆಗೊಳಪಡಿಸಿದ್ದಾರೆ. ಗರ್ಭಿಣಿಯ ಮೃತದೇಹವನ್ನ ಈಗಾಗಲೇ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.