ನನಗೆ ಸಚಿವ ಸ್ಥಾನ ಕೊಟ್ಟರೆ ಬೇಡ ಅನ್ನಲ್ಲ : ಶಾಸಕ ಎನ್.ಮಹೇಶ್
ಹಾಸನ: ನನಗೆ ಸಚಿವ ಸ್ಥಾನ ಕೊಟ್ಟರೆ ಬೇಡ ಅನ್ನಲ್ಲ, ಆದರೆ ಸಚಿವ ಸ್ಥಾನ ಆಕಾಂಕ್ಷಿ ನಾನಲ್ಲ ಎಂದು ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಷರತ್ತುಗಳನ್ನು ಹಾಕಿ ಅಥವಾ ಆಮಿಷಗಳಿಗೆ ಒಳಗಾಗಿ ಬಿಜೆಪಿ ಪಾರ್ಟಿಗೆ ಸೇರಿಲ್ಲ. ನನ್ನನ್ನ ಬಳಸಿಕೊಂಡು ಅವಕಾಶ ಕೊಟ್ಟರೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಸಂಘಟನೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಕೂಗು ಬುಗಿಲೆದ್ದಿದ್ದು, ರಾಜ್ಯದ ವಿಧಾನಸಭೆಯ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಸಚಿವ ಆಕಾಂಕ್ಷಿಗಳು ತೆರೆಯ ಮೇಲೆ ಬಂದು ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿದ್ದಾರೆ. ಸಿಎಂ ಬೊಮ್ಮಾಯಿ ಇದಕ್ಕೆ ತೆರೆ ಎಳೆದಿದ್ದು, ಸಂಪುಟ ಪುನರ್ ರಚನೆ ಬಗ್ಗೆ ಹೈಕಮಾಂಡ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳುವ ಮೂಲಕ ಸದ್ಯಕ್ಕೆ ಬುಗೆಲಿದ್ದಿರುವ ಬಿಸಿಗೆ ನೀರೆರದಿದ್ದಾರೆ.
ಬಿಎಸ್ಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ಮಾತನಾಡಿ, ನನ್ನನ್ನು ಬಿಎಸ್ಪಿಯಿಂದ ಉಚ್ಛಾಟನೆ ಮಾಡದಿದ್ದರೆ ಅದೇ ಪಕ್ಷದಲ್ಲಿ ಮುಂದುವರಿಯುತ್ತಿದ್ದೆ. ಆದರೆ ಒಂದೇ ಭಾರಿ ನನ್ನನ್ನು ಕಟ್ ಮಾಡಿ ಬಿಸಾಡಿದ್ರು. ಮುಂದಿನ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿ ಪರ ಕೆಲಸ