ನಿಮ್ಮ ಮುಂದೆ ಭಿಕ್ಷೆ ಕೇಳಲು ಬಂದಿದ್ದೇನೆ : ಡಿ.ಕೆ.ಶಿವಕುಮಾರ್ DK Shivakumar saaksha tv
ಹಾಸನ : ಹೊಳೆನರಸೀಪುರದ ಜನರ ಜೊತೆ ರಾಜಕೀಯವಾಗಿ ನಿಲ್ಲಲು ನಿಮ್ಮ ಮುಂದೆ ಭಿಕ್ಷೆ ಕೇಳಲು ಬಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸರಿಯಾಗಿ ಅಧಿಕಾರ ನಡೆಸಲಿಲ್ಲ ಎಂದು ಸೋಲಿಸಿದರು.
ನಾನು ಸೋತಿದ್ದೇನೆ, ಇದೆಲ್ಲ ರಾಜಕಾರಣದ ಇತಿಹಾಸದಲ್ಲಿ ಬೇಕಾದಷ್ಟು ಆಗಿದೆ.
ದೇವೇಗೌಡರು, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಎಲ್ಲರೂ ಈ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ.
ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದೋ ಒಂದು ವರ್ಗ ಅಧಿಕಾರಕ್ಕೆ ಬಂದ ಹಾಗೆ ಎಂದರು.
ಇನ್ನು ದೇವೇಗೌಡರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ. ಜಾತ್ಯಾತೀತತೆ ಉಳಿಸಲು ಸಮಾಧಾನ ಇದೆಯೋ ಇಲ್ಲವೋ ಒಪ್ಪಿಕೊಂಡಿದ್ದೇವೆ.
ಆದರೆ ಹೊಳೆನರಸೀಪುರದ ಜನರ ಜೊತೆ ರಾಜಕೀಯವಾಗಿ ನಿಲ್ಲಲು ನಿಮ್ಮ ಮುಂದೆ ಭಿಕ್ಷೆ ಕೇಳಲು ಬಂದಿದ್ದೇನೆ.
ನಿಮ್ಮ ನೋವನ್ನು ಅನೇಕ ನಾಯಕರು ನಮ್ಮ ಬಳಿ ಬಂದು ಹೇಳುತ್ತಿದ್ದಾರೆ. ನಿಮ್ಮ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಲಿದೆ.
ಬೆಂಗಳೂರಿನಿಂದ ಮೇಕೆದಾಟುವರೆಗೂ ಪಾದಯಾತ್ರೆ ಮಾಡಲು ಹೇಳಲು ಇಲ್ಲಿಗೆ ಬಂದಿದ್ದೇನೆ.
ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನೀವೆಲ್ಲ ದೊಡ್ಡ ಮನಸ್ಸು ಮಾಡಿ ನೀವು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.









