ಕೊರೋನವೈರಸ್ ವುಹಾನ್ ಪ್ರಯೋಗಾಲಯದ ಸೃಷ್ಟಿ ಎನ್ನಲು ನನ್ನಲ್ಲಿ ಪುರಾವೆಗಳಿವೆ – ಚೀನಾದ ವೈರಾಲಜಿಸ್ಟ್
ವಾಷಿಂಗ್ಟನ್, ಸೆಪ್ಟೆಂಬರ್14: ಕೊರೋನವೈರಸ್ ವುಹಾನ್ ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟಿದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆ ಇದೆ ಎಂದು ಚೀನಾದ ವೈರಾಲಜಿಸ್ಟ್ ವೀಡಿಯೊ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಡಾ. ಲಿ-ಮೆಂಗ್ ಯಾನ್ ಎಂಬ ಚೀನಾದ ವಿಜ್ಞಾನಿ ಕಳೆದ ವರ್ಷದಿಂದ ಕೊರೋನವೈರಸ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಅವರು ಹಾಂಗ್ ಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಕೆಲಸ ಮಾಡುತ್ತಿದ್ದಾಗ ಕೊರೋನವೈರಸ್ ಲ್ಯಾಬ್ ನಿರ್ಮಿತವಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.
ವುಹಾನ್ನಲ್ಲಿನ ನ್ಯುಮೋನಿಯಾ ಕುರಿತು ನಡೆಸಿದ ತನಿಖೆಯ ಸಮಯದಲ್ಲಿ, ಅವರು ಕೊರೋನವೈರಸ್ ಬಗ್ಗೆ ತಿಳಿದುಕೊಂಡರು ಮತ್ತು ಕೊರೋನವೈರಸ್ ವರದಿಯಾದಾಗ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದಿರುವ ಅವರು ಜಗತ್ತು ಎದುರಿಸಲಿರುವ ಅಪಾಯದ ಬಗ್ಗೆ ತಿಳಿದಿದ್ದರೂ ಚೀನಾದ ಅಧಿಕಾರಿಗಳು ಆಕೆಯ ಎಚ್ಚರಿಕೆಗಳನ್ನು ಕಡೆಗಣಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವೀಡಿಯೊ ಸಂದರ್ಶನದಲ್ಲಿ ಯಾನ್, ವೈರಸ್ ವುಹಾನ್ ಲ್ಯಾಬ್ ನಲ್ಲಿ ಮಾಡಲ್ಪಟ್ಟಿದೆ ಮತ್ತು ಆ ನಿರ್ದಿಷ್ಟ ಲ್ಯಾಬ್ ಅನ್ನು ಚೀನಾ ಸರ್ಕಾರವು ನಿಯಂತ್ರಿಸುತ್ತದೆ ಎಂದು ಹೇಳಿದ್ದಾರೆ.
ಮಾನವನಿಂದ ಮಾನವನಿಗೆ ಹರಡುತ್ತದೆ ಎಂದು ಚೀನಾದ ಅಧಿಕಾರಿಗಳಿಗೆ ತಿಳಿದಿತ್ತು ಮತ್ತು SARS CoV-2 ಹೆಚ್ಚಿನ ರೂಪಾಂತರಿತ ವೈರಸ್ ಆಗಿದ್ದು, ಅದನ್ನು ಯಾರೂ ನಿಯಂತ್ರಿಸದಿದ್ದರೆ ಜಗತ್ತಿಗೆ ಅಪಾಯ ಕಾದಿದೆ ಎಂದು ಅವರಿಗೆ ತಿಳಿದಿತ್ತು ಎಂದು ಯಾನ್ ಹೇಳಿದ್ದಾರೆ.
ಈ ವೈರಸ್ ಪ್ರಕೃತಿಯಿಂದ ಬಂದದ್ದಲ್ಲ ಎಂದು ಅವರು ಒತ್ತಿ ಹೇಳಿದ್ದು ಚೀನಾದಲ್ಲಿನ ಲ್ಯಾಬ್ನಿಂದ ಇದು ಏಕೆ ಬಂದಿದೆ ಮತ್ತು ಅವರು ಅದನ್ನು ಏಕೆ ಮಾಡಿದ್ದಾರೆ ಎಂದು ಜನರಿಗೆ ಹೇಳಲು ನಾನು ಪುರಾವೆಗಳನ್ನು ನೀಡಬಲ್ಲೆ ಎಂದು ಯಾನ್ ಹೇಳಿದ್ದಾರೆ.