ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಡಿಸ್ಚಾರ್ಜ್ ಆಗಿ ಆಘಾತಕಾರಿ ಅಂಶಗಳ ಕುರಿತು ಮಾತನಾಡಿದ್ದಾರೆ.
ಇಲ್ಲಿಯವರೆಗೆ 5 ಬಾರಿ ಮರುಜನ್ಮ ಪಡೆದಿದ್ದೇನೆ. ಈ ಬಾರಿ ಸ್ವಲ್ಪ ತಡ ಮಾಡಿದ್ದರೂ ನಿಮ್ಮೊಂದಿಗೆ ಮಾತನಾಡಲು ಆಗುತ್ತಿರಲಿಲ್ಲ. ತಂದೆ-ತಾಯಿ ಅಶೀರ್ವಾದದಿಂದ ನಾನು ಇಲ್ಲಿದ್ದೇನೆ. ನಗೆ ಪುನರ್ಜನ್ಮ ಸಿಕ್ಕಿದೆ. ಈಗ ಆರೋಗ್ಯವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ನನ್ನ ದೇಹದಲ್ಲಿ ಬದಲಾವಣೆ ಕಂಡುಬಂದಿತು, ಧ್ವನಿಯಲ್ಲೂ ಬದಲಾವಣೆ ಕಂಡುಬಂದಿತು. ಕೂಡಲೇ ಡಾ.ಮಂಜುನಾಥ್ ಹಾಗೂ ಡಾ.ಯತೀಶ್ ಅವರಿಗೆ ಕರೆ ಮಾಡಿ, ಬಿಡದಿಯ ತೋಟದಿಂದ ಇಪ್ಪತ್ತೇ ನಿಮಿಷಕ್ಕೆ ಆಸ್ಪತ್ರೆಗೆ ಬಂದೆ ಎಂದು ಹೇಳಿದ್ದಾರೆ. ನಾನು ಆಗ ತುಂಬಾ ಕ್ಲಿಷ್ಟಕರ ಸನ್ನಿವೇಶ ಎದುರಿಸಿದ್ದೇನೆ. ಈ ರೀತಿಯ ಆರೋಗ್ಯ ಸಮಸ್ಯೆಯಾದಾಗ ಯಾರೂ ನಿರ್ಲಕ್ಷ್ಯ ಮಾಡಬಾರದು.. ಗೋಲ್ಡನ್ ಅವರ್ನಲ್ಲಿ ನಾವು ಚಿಕಿತ್ಸೆ ಪಡೆಯದಿದ್ದರೆ ಜೀವನ ಪರ್ಯಂತ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದ್ದಾರೆ.